ಮೂಡಿಗೆರೆ :ತಾಲ್ಲೂಕಿನ ಇತಿಹಾಸ ಪ್ರಸಿದ್ದ ಹೊಯ್ಸಳಲು ಗ್ರಾಮ ದೇವತೆ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು.
ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಿದ್ದವು.
ಜಾತ್ರಾ ಮಹೋತ್ಸವ ಅಂಗವಾಗಿ ಅಮ್ಮನವರಿಗೆ ವಿಶೇಷ ಅಲಂಕಾರ ಹಾಗೂ ದೇವಾಲಯಕ್ಕೂ ಕೂಡ ವಿಶೇಷ ಮಾಡಲಾಗಿತ್ತು.ಮಧ್ಯಾಹ್ನ ಮಾರಮ್ಮ ದೇವಿಯ ಕಳಸ ಮಹೋತ್ಸವ ಹಾಗೂ ಗಟಿಭಾನ ಅದ್ದೂರಿಯಾಗಿ ಊರಿನ ರಾಜಬೀದಿಯಲ್ಲಿ ನಡೆಯಿತ್ತು. ಮೂರು ದಿನಗಳ ಕಾಲ ನಡೆದ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಕೊನೆ ಗೊಂಡಿತ್ತು.ಜಿಲ್ಲೆಯ ವಿವಿಧಡೆಗಳಿಂದ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಅಮ್ಮನವರ ದರ್ಶನ ಪಡೆದರು.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ