ಕೋವಿಶೀಲ್ಡ್ ನ ಎರಡನೇ ಡೋಸ್ ಪಡೆಯಲು ನಿನ್ನೆ ಜಿಲ್ಲಾಸ್ಪತ್ರೆಗೆ ಹೋಗಿದ್ದೆ. ಅಲ್ಲಿ ನೋಡಿದರೆ ಲಸಿಕಾ ಕೇಂದ್ರವೇ ಇಲ್ಲ.! ವಿಚಾರಿಸಿದರೆ, ಎಮ್ ಜಿ ರಸ್ತೆ ಬಳಿಯ ಮುನ್ಸಿಪಲ್ ಆಸ್ಪತ್ರೆಗೆ ಹೋಗಿ ಅಲ್ಲಿ ದೊರೆಯುತ್ತದೆ ಎಂಬ ಉತ್ತರ. ಇವತ್ತು ಬೆಳಿಗ್ಗೆ ಅಲ್ಲಿಗೆ ಹೋದರೆ ಅಂದಾಜು 300-350 ಜನರ ಉದ್ದ ಸಾಲು ಟೋಕನ್ ಪಡೆಯಲು ನಿಂತಿತ್ತು. ಸಾಲನ್ನು ನೋಡಿಯೇ ಗಾಬರಿಯಾಗಿ ವಾಪಸ್ಸು ಬಂದೆ. ಇನ್ನೀಗ ಖಾಸಗಿಯಲ್ಲಿ ಎಲ್ಲಿಯಾದರೂ ಹುಡುಕಬೇಕು. ಲಸಿಕೆಗೆ ಜಿಲ್ಲಾಸ್ಪತ್ರೆಯಲ್ಲಿಯೇ ವ್ಯವಸ್ಥೆಯಿಲ್ಲದಿರುವುದು ನಾಚಿಕೆಗೇಡು.
ಸರ್ಕಾರ ಅಷ್ಟು ಕೊಟ್ಟೆವು ಇಷ್ಟು ಕೊಟ್ಟೆವು , ದಾಖಲೆ ಮಾಡಿದೆವು ಎಂಬ ಜಾಹೀರಾತು ಫಲಕಗಳನ್ನು ಊರುತುಂಬಾ ನಿಲ್ಲಿಸುವ ಖರ್ಚಿನಲ್ಲಿ ಲಸಿಕಾ ಕೇಂದ್ರಗಳನ್ನು ಹೆಚ್ಚಿಸಿ, ಲಸಿಕೆಗಳನ್ನು ಸರಾಗವಾಗಿ ಪಡೆಯುವಂತೆ ಅನುಕೂಲ ಕಲ್ಪಿಸಿದರೆ ಜನರಿಗೆ ದೊಡ್ಡ ಉಪಕಾರವಾಗುತ್ತದೆ.
ಅಂದಹಾಗೆ ಈಗ covin ಆ್ಯಪ್ ನಲ್ಲಿ ಸ್ಲಾಟ್ ಬುಕ್ ಮಾಡುವ ಸೌಲಭ್ಯವನ್ನು ತೆಗೆಯಲಾಗಿದೆ. Digital India!
ವರದಿ:
ಕಾರ್ತಿಕ್ ಗೌಡ ಬೆಳಗೂಡು
ಸಾಮಾಜಿಕ ಕಾರ್ಯಕರ್ತ
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ