:ಶ್ರೀ ದೇವರಮನೆ ಕಾಲಭೈರೈಶ್ವರ ಸನ್ನಿಧಾನದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಅವರ ದೀರ್ಘಾಯುಸ್ಸು ಹಾಗೂ ಆರೋಗ್ಯಕ್ಕಾಗಿ ಇಂದು ಬಿಜೆಪಿ ಯುವ ಮೋರ್ಚಾ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.
ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂದೀಪ್ ಹರವಿನಗಂಡಿ ನರೇಂದ್ರ ಮೋದಿಯವರಂತಹ ದೇವತ ಮನುಷ್ಯ ನಮ್ಮ ಪ್ರಧಾನಿ ಆಗಿರುವುದು ನಮ್ಮ ಹೆಮ್ಮೆಯ ವಿಚಾರ, ಇತ್ತೀಚೆಗೆ ಪಂಜಾಬ್ ಕಾಂಗ್ರೆಸ್ ಸರ್ಕಾರ ರ ಅವರ ಭದ್ರತೆ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿತ್ತು ಆದರೆ ನೂರಾರು ಕೋಟಿ ಭಾರತೀಯರ ಶ್ರೀರಕ್ಷೆ ಅವರನ್ನು ಎನೂ ಮಾಡಲು ಸಾಧ್ಯವಾಗಲಿಲ್ಲ ಎಂದರು
ಮೂಡಿಗೆರೆ ತಾಲೂಕು ಬಿಜೆಪಿ ಅಧ್ಯಕ್ಷ ರಘು ಜನ್ನಾಪುರ ಮಾತನಾಡಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸೈನಿಕರಿದ್ದಂತೆ ಸಮಾಜದಲ್ಲಿ ಎನೇ ನಡೆದರೂ ಕೂಡಲೇ ಸ್ಪಂದಿಸುವ ಕಾರ್ಯ ಮಾಡಬೇಕು ಬಿಜೆಪಿ ಪ್ರತಿಯೊಬ್ಬ ನಾಯಕರು ಕೂಡಾ ಯುವ ಮೋರ್ಚಾದಲ್ಲಿ ಕೆಲಸ ಮಾಡಿ ದೊಡ್ಡ ಹುದ್ದೆ ಪಡೆದಿದ್ದಾರೆ ಎಂದರು
ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಶುಭಾಷ್ ಚಂದ್ರ ಬೋಸ್ ಅವರ ಜಯಂತಿಯನ್ನು ಆಚರಿಸಲಾಯಿತು
ತಾಲೂಕು ಯುವ ಮೋರ್ಚ ಅಧ್ಯಕ್ಷ ಅವಿನಾಶ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಧನಿಕ್, ಪ್ರಧಾನ ಕಾರ್ಯದರ್ಶಿ ಪಂಚಾಕ್ಷರಿ, ರೈತ ಮೋರ್ಚಾ ಕಾರ್ಯದರ್ಶಿ ಪರೀಕ್ಷಿತ್ ಜಾವಳಿ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ್ ಕೋಟ್ಯಾನ್, ಗಗನ್ ಕಡೂರು, ಸಂಜಯ್ ಗೌಡ ಕೊಟ್ಟಿಗೆಹಾರ,ಅಜಿತ್ ದುರ್ಗದಹಳ್ಳಿ ,ಅರುಣ್ ಕುಂಬರಡಿ,ಚಿರಾಗ್ ಕೊಟ್ರಕೆರೆ ,ಉತ್ತಮ್ ಬಣಕಲ್,ವಿಶ್ವ ಮುಗ್ರಹಳ್ಳಿ,ಮಿಥುನ್ ಬೆಳ್ಳಿ,ಅನಿಲ್ ಮೂಡಿಗೆರೆ, ಪಟ್ಟಣ ಪಂಚಾಯಿತಿ ಸದಸ್ಯ ಮನೋಜ್,ಪ್ರಸಾದ್ ಕುಂದೂರು,ಮುಂತಾದವರಿದ್ದರು
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ