ಆನ್ಲೈನ್ ಕ್ಲಾಸ್ ನೆಪ, ಸ್ಮಾರ್ಟ್ ಫೋನ್ ಜಪ.. ಮಕ್ಕಳ ಕೈಲಿ ಮೊಬೈಲ್ ಆಟಾಟೋಪಾ..!

ಬಣಕಲ್ :ಕೋವಿಡ್ 19ರ ಕಾರುಬಾರಿನಿಂದಾಗಿ ಪೋಷಕರ ಕೈನಲ್ಲಿದ್ದ ಸ್ಮಾರ್ಟ್‌ಫೋನ್‌ಗಳು ದಿನಪೂರ್ತಿ ಮಕ್ಕಳ ಕೈ ಸೇರಿವೆ. ಇದರ ಅಪಾಯದ ಅರಿವಿದ್ದರೂ, ಅನಿವಾರ್ಯವಾಗಿ ಆನ್‌ಲೈನ್‌ ತರಗತಿಗಳಿಗೆ ಪೋಷಕರು ತಲೆ ಭಾಗಬೇಕಾಗಿತ್ತು .

ಆದರೆ ಆನ್ಲೈನ್ ಕ್ಲಾಸ್ ಎಂಬ ಪಿಡುಗು ಮಕ್ಕಳ ಭವಿಷ್ಯವನ್ನು ಬೆಳಗೋ ಬದಲು ಮೊಳಕೆಯಲ್ಲೇ ಚಿವುಟುತ್ತಿದೆ.

ಆನ್ ಕ್ಲಾಸ್ ಮುಗಿದು 6ತಿಂಗಳಿಂದ ಆಫ್ ಲೈನ್ ತರಗತಿಗಳು ಪ್ರಾರಂಭ ಗೊಂಡಿದೆ. ಆದರೆ ಶಾಲಾ ಮಕ್ಕಳ ಕೈಯಲ್ಲಿ ಮೊಬೈಲ್ ಮಾತ್ರ ಮಾಯವಾಗಿಲ್ಲ ಇದರ ಬಗ್ಗೆ ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರು ಗಮನ ಹರಿಸದಿದ್ದಲ್ಲಿ ಮುಂದೊಂದು ದಿನ ಶಾಲೆ ಹಾಗೂ ಪೋಷರಿಗೆ ಕೆಟ್ಟ ಹೆಸರು ಬರುವ ದಿನ ದೂರವಿಲ್ಲ.
ಶಾಲೆ ಹಾಗೂ ಟ್ಯೂಶನ್‌ ಸೇರಿದಂತೆ ಒಂದು ದಿನದಲ್ಲಿ 11 ರಿಂದ 12 ಗಂಟೆಗಳ ಕಾಲ ಮಕ್ಕಳು ಮೊಬೈಲ್‌ಗಳಿಂದ ದೂರವಿರುತಿದ್ದರು. ಆದ್ರೆ, ಈಗ ಮಕ್ಕಳಿಗೆ 2 ಗಂಟೆ ಕಾಲ ಆನ್‌ಲೈನ್ ತರಗತಿ‌ ನೆಪದಿಂದ ಸ್ಮಾರ್ಟ್‌ಪೋನ್‌ಗಳು ಕೈಗೆ ಸಿಕ್ಕಿವೆ. ಲಾಕ್‌ಡೌನ್‌ 3.0 ನಂತರ ಮಕ್ಕಳ ಮೊಬೈಲ್ ಬಳಕೆ ಹತ್ತು ಪಟ್ಟು ಹೆಚ್ಚಾಗಿದೆ. ಇನ್ನು ಕೆಲಸಕ್ಕೆ ಹೋಗುವ ಪೋಷಕರು ಮಕ್ಕಳ ಚಟುವಟಿಕೆ ಮೇಲೆ ನಿಗಾ ಇರಿಸಲು ಸಾಧ್ಯವಾಗುತ್ತಿಲ್ಲ.
ಮಕ್ಕಳ ಕೈಗೆ ಸ್ಮಾರ್ಟ್‌ಫೋನ್ ಕೊಟ್ಟರೆ ಅಪಾಯ
ಮಕ್ಕಳು ತಮ್ಮ ಸ್ಮಾರ್ಟ್‌ ಫೋನ್‌ಗೆ ನೆಟ್‌ಪ್ಯಾಕ್ ಹಾಕಿಸಿಕೊಂಡು ಇಂಟರ್‌ನೆಟ್‌ ಜಾಲಾಡುತ್ತಿದ್ದಾರೆ.‌ ಮಕ್ಕಳ ಮೊಬೈಲ್‌ ಬಳಕೆ ಆನ್‌ಲೈನ್‌ ತರಗತಿಗಿಂತಾ ಹೆಚ್ಚಾಗಿ ಬೇರೆ ವಿಚಾರಕ್ಕೇ ಆಗುತ್ತಿದೆ..! ಗೇಮ್ಸ್‌, ಟಿಕ್‌ ಟಾಕ್‌, ಯೂ ಟ್ಯೂಬ್‌ ಮಾತ್ರವಲ್ಲ ಅಶ್ಲೀಲ ಪ್ರಪಂಚಕ್ಕೂ ಕಣ್ಣು ಹಾಕುವ ಅಪಾಯ ಎದುರಾಗಿದೆ.ಇದರಿಂದ ಮಕ್ಕಳು ದಾರಿ ತಪ್ಪುವಂತಾಗಿದೆ.ಮೊಬೈಲ್‌ ಜತೆ ಮೊದಲಿಗಿಂತ ಹತ್ತು ಪಟ್ಟು ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಆನ್‌ಲೈನ್‌ ತರಗತಿ ಪ್ರಾರಂಭವಾದಾಗಿನಿಂದ ಮಕ್ಕಳು ಓದುವುದರ ಕಡೆ ಗಮನ ಹರಿಸದೆ ಸೋಷಿಯಲ್ ಮೀಡಿಯಾಗಳಿಗೆ ಮೊರೆ ಹೋಗಿದ್ದಾರೆ ಹದಿ ಹರೆಯದಲ್ಲೆ ಪ್ರೀತಿ ಪ್ರೇಮದ ಬಲೆಯಲ್ಲಿ ಮುಳುಗಿದ್ದಾರೆ. ಪೋಷಕರು ಹಾಗೂ ಶಿಕ್ಷಕರಿಗೆ ಯಾಮಾರಿಸುತ್ತಿದ್ದಾರೆ ಘಟನೆ ನಡೆದ ನಂತರ ಪಶ್ಚತ್ತಾಪ ಪಡುವುದಕ್ಕಿಂತ ಮೊದಲಿನಿಂದಲೇ ಮಕ್ಕಳ ಮೇಲೆ ಗಮನವಿದ್ದರೆ ಮುಂದಾಗುವ ಅಪಾಯವನ್ನುತಪ್ಪಿಸಬಹುದಾಗಿದೆ.