ಬಣಕಲ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಬದುಕು ಕಲಿಸಿದ ನೆಚ್ಚಿನ ಶಿಕ್ಷಕಿಗೆ ಅವಿಸ್ಮರಣೀಯ ಬೀಳ್ಕೊಡುಗೆ..!

ಬಣಕಲ್:
ತಾಲೂಕಿನ ಬಣಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 23ವರ್ಷಗಳ ಕಾಲ ದೈಹಿಕ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ರಾಮಮ್ಮ ಅವರನ್ನು ಬಣಕಲ್ ಫ್ರೆಂಡ್ಸ್ ಕ್ಲಬ್ ನ ಪದಾಧಿಕಾರಿಗಳು ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅತ್ಮೀಯವಾಗಿ ಸನ್ಮಾನಿಸಿ, ಬೀಳ್ಕೊಟ್ಟರು.
ಗ್ರಾಮದ ಶಾಲೆ ಅವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ನಿವೃತ್ತರಾದ ರಾಮಮ್ಮ ಅವರನ್ನು ಶಾಲು ಹೊದಿಸಿ, ಫಲಾತಾಂಬುಲು ನೀಡಿ, ಹಾರ ಹಾಕಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.
ಬಳಿಕ ಮಾತನಾಡಿದ ಬಣಕಲ್ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರಾದ ಅರುಣ್ ಪೂಜಾರಿ ಅವರು ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದ ವೃತ್ತಿಯಾಗಿದೆ. ಮಕ್ಕಳ ಸರ್ವತೋಮುಖ ಅಭಿವೃದ್ದಿ ಯನ್ನು ಬಯಸಿ ದುಡಿಯುವ ಶಿಕ್ಷಕರು ನಿವೃತ್ತಿ ಬಳಿಕವು ಸಹ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ಪ್ರೀತಿ ಪಾತ್ರರಾಗಿತ್ತಾರೆ. ಮಕ್ಕಳಿಗೆ ಶಿಕ್ಷಣ ಕೊಡುವ ಜೊತೆಗೆ ಪೋಷಕರ ಜೊತೆಗೆ ನಿಕಟ ಸಂಪರ್ಕವನ್ನು ಹೊಂದಿ ಅವರ ಆಗುಹೋಗುಗಳ ಬಗ್ಗೆ ಹೆಚ್ಚಿನ ಗಮನ ನೀಡುವ ಶಿಕ್ಷಕರು ದೇವರಿಗೆ ಸಮಾನರು. ಇಂಥ ಪವಿತ್ರ ವೃತ್ತಿಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ನಿವೃತ್ತರಾಗಿರುವ ರಾಮಮ್ಮ ಅವರಿಗೆ ಒಳ್ಳೆಯದಾಗಲಿ, ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಆಶಿಸಿದರು.
ಸರ್ಕಾರಿ ಕರ್ತವ್ಯ ಸೇರಿದ ಬಳಿಕ ನಿವೃತ್ತಿ ಕಡ್ಡಾಯವಾಗಿರುತ್ತದೆ. ಈ ಮಧ್ಯೆ ನಾವು ಸಲ್ಲಿಸಿರುವ ಸೇವೆಯು ಇನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಇಂಥ ಸೇವೆಯನ್ನು ರಾಮಮ್ಮ ಅವರು ತಮ್ಮ ವೃತ್ತಿ ಜೀವನುದ್ದುಕ್ಕು ಮಾಡಿದ್ದಾರೆ. ಸರಳ ವ್ಯಕ್ತಿತ್ವ, ಮಿತಿಭಾಷಿ, ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಒಡನಾಟವನ್ನು ಹೊಂದಿ ಶಾಲೆಯ ಪ್ರಗತಿಗೆ ದುಡಿದಿದ್ದಾರೆ. ಅವರ ಸೇವೆ ಅವಿಸ್ಮರಣೀಯವಾಗಿದೆ. ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕಿ ರಾಮಮ್ಮ , ಕಳೆದ 23 ವರ್ಷಗಳ ಸೇವೆಯಲ್ಲಿ ನನಗೆ ಸಹಕಾರ ನೀಡಿದ ಎಲ್ಲರಿಗೂ ಸಹ ಚಿರಋಣಿಯಾಗಿದ್ದೇನೆ. ಬಣಕಲ್ ಪ್ರಾರ್ಥಮಿಕ ಶಾಲೆಗೆ ದೈಹಿಕ ಶಿಕ್ಷಕಿಯಾಗಿ ಬಂದಾಗ ಗ್ರಾಮಸ್ಥರು ಹಾಗೂ ಪೋಷಕರು ಒಳ್ಳೆಯ ಸಹಕಾರ ನೀಡಿದ್ದಾರೆ. ಪ್ರತಿಯೊಂದು ವಿಚಾರಗಳಿಗೂ ಸಹ ಉತ್ತಮವಾಗಿ ಸ್ಪಂದಿಸುವ ಜೊತೆಗೆ ನಮ್ಮ ಶಾಲೆ ಎಂಬ ಹೆಮ್ಮೆಯೊಂದಿಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಮಾರ್ಗದರ್ಶನ ನೀಡಿದ್ದಾರೆ.ನನ್ನ ವೃತ್ತಿ ಜೀವನದಲ್ಲಿ ಉತ್ತಮ ಸೇವೆ ಸಲ್ಲಿಸಿದ ತೃಪ್ತಿ ಇದೆ. ಎಲ್ಲರಿಗೂ ಮತ್ತೋಮ್ಮೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.
ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಶಾಲೆಯ ಸಹ ಶಿಕ್ಷಕರು. ಅಡುಗೆ ಸಹಾಯಕಿಯರು. ವಿದ್ಯಾರ್ಥಿಗಳು. ಫ್ರೆಂಡ್ಸ್ ಕ್ಲಬ್ ನ ಕಾರ್ಯದರ್ಶಿ ನಿಶಾಂತ್. ರಂಗನಾಥ್. ಹಸೈನಾರ್. ಸೂರಿ. ಹಾಗೂ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು