ಕೊರೋನ ವೈರಸ್ ಹಿನ್ನಲೆಯಲ್ಲಿ ಸರಳವಾಗಿ ಗಣೇಶ ಹಬ್ಬವನ್ನು ಆಚರಿಸಲು ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ ಪ್ರತಿವರ್ಷಹೆಗ್ಗುಡ್ಲು ಗ್ರಾಮದ ಜನರು ಅದ್ದೂರಿಯಾಗಿ ಗಣೇಶ ಹಬ್ಬವನ್ನು ಆಚರಣೆ ಮಾಡುತ್ತಾ ಬಂದಿದ್ದರು ಆದರೆ ಕಳೆದ 2ವರ್ಷ ದಿಂದ ಹಬ್ಬಗಳಿಗೆ ಕೊರೋನ ತಡೆಯೋಡ್ಡಿದರಿಂದ ಹಬ್ಬಗಳಿಗೆ ಬ್ರೇಕ್ ಬಿದ್ದಿದೆ ಈ ಹಿನ್ನಲೆಯಲ್ಲಿ ಗ್ರಾಮಸ್ಥರು ಸರಳವಾಗಿ ಆಚರಣೆ ಮಾಡಲು ನಿರ್ದರಿಸಿದ್ದಾರೆ ಹೆಗ್ಗುಡ್ಲು ಗ್ರಾಮದ ನಾಗರಿಕರು ಇಂದು ಗ್ರಾಮದ ಶಾಂತಿಮೈದಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ ಮಾಡಿದರು ಊರಿನಲ್ಲಿ ಒಂದು ದಿನದ ಮಟ್ಟಿಗೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ ಇವತ್ತು ಬೆಳಗ್ಗೆ ಗ್ರಾಮದ ಜನರು ಸೇರಿ ಶಾಂತಿ ಮೈದಾನದ ಸುತ್ತ ಮುತ್ತ ಬೆಳೆದ ಗಿಡ ಗುಂಟೆಗಳನ್ನು ತೆಗೆದು ಸ್ವಚ್ಛತಾ ಕಾರ್ಯಕ್ರಮ ಮಾಡಿದರು ಗಣೇಶನನ್ನು ಆಹ್ವಾನಿಸಲು ಗ್ರಾಮಸ್ಥರು ಖುಷಿಯಿಂದ ಸಜ್ಜಾಗಿ ನಿಂತಿದ್ದಾರೆ
