ಚಿಕ್ಕಮಗಳೂರು: ಬಣಕಲ್-ಪ್ರತಿ ವರ್ಷವೂ ಬಣಕಲ್ ಹೋಬಳಿಯ ಬಿ.ಹೊಸಹಳ್ಳಿಯಲ್ಲಿ ಆ ಊರಿನ ಮುಸ್ಲಿಂ ಮತ್ತು ಹಿಂದೂ ಧರ್ಮದವರು ಭಕ್ತಿಯಿಂದ ಮೊಹರಂ ಹಬ್ಬದ ಆಚರಣೆಯ ಪ್ರಯುಕ್ತ ಮೊಹರಂ ಹಿಂದಿನ ದಿನ ಆಲಾದಿ ದೇವರಿಗೆ ಪೂಜೆ ಮಾಡುವ ಸಂಪ್ರದಾಯ.ಮೊಹರಂ ಮುಸ್ಲಿಮರಿಗೆ ಪ್ರಮುಖ ತಿಂಗಳುಗಳಲ್ಲಿ ಒಂದಾಗಿದೆ ಹಾಗೂ ಇಸ್ಲಾಂ ಧರ್ಮಕ್ಕೆ ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ.ಹಿಂದಿನಿಂದಲೂ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ಬಿ.ಹೊಸಹಳ್ಳಿ ಯ ಕೆಲ ಮುಸ್ಲಿಂ ಮತ್ತು ಈ ಭಾಗದ ಹಿಂದೂ ಧರ್ಮ ದವರು ಮೊಹರಂ ಪ್ರಯುಕ್ತ ಆಲಾದಿ ದೇವರಿಗೆ ಪೂಜೆ ಮಾಡಿದರು.ಪಂಡು , ಸಾಧಿಕ್, ಬುಡ್ಡು ಸಾಹೇಬರು, ಪ್ರಶಾಂತ್, ಶರತ್, ಸುದಾತ್, ಶಿವಣ್ಣ ಗೌಡರು, ಇನ್ನಿತರರು ಇದ್ದರು.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ