ಕನ್ನಡದ ಕಂಪು: ಮಕ್ಕಳ ವೇಷಭೂಷಣಕ್ಕೆ ಮನಸೋತ ಜನತೆ!

ಬಣಕಲ್ :ಅಲ್ಪಸಂಖ್ಯಾತರ ಇಲಾಖೆಯ ಅಧೀನದಲ್ಲಿರುವ ಮೂಡಿಗೆರೆಯ ಮೌಲಾನಾ ಆಜಾದ್ ಮಾದರಿ ಶಾಲೆಯ ವತಿಯಿಂದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಶೇಷ ರೀತಿಯಲ್ಲಿ ಮಕ್ಕಳನ್ನು ವಿವಿಧ ವೇಷಭೂಷಣಗಳಿಂದ ಅಲಂಕರಿಸುವ ಮೂಲಕ ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಲಾಯಿತು.


ಶಾಲೆಯ ಮಕ್ಕಳ ವಿಭಿನ್ನ ವೇಷಭೂಷಣಗಳು ಸಮ್ಮೇಳನಕ್ಕೆ ಆಗಮಿಸಿದ್ದ ಸಾವಿರಾರು ಜನರ ಗಮನ ಸೆಳೆದವು. ಮಕ್ಕಳ ಸುಂದರ ವೇಷಭೂಷಣಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ ಸಾರ್ವಜನಿಕರು ಮಕ್ಕಳೊಂದಿಗೆ ಫೋಟೋ ತೆಗೆಸಿಕೊಂಡು ತಮ್ಮ ಸಂತೋಷವನ್ನು ಹಂಚಿಕೊಂಡರು.
ಒಟ್ಟಿನಲ್ಲಿ, ಕನ್ನಡದ ಕಂಪನ್ನು ಮಕ್ಕಳ ಮೂಲಕ ಸಾರಿದ ಮೌಲಾನಾ ಆಜಾದ್ ಮಾದರಿ ಶಾಲೆಯ ಈ ವಿಭಿನ್ನ ಪ್ರಯತ್ನವು ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಯಿತು.


ವರದಿ ✍️ಸೂರಿ ಬಣಕಲ್