ಚೇಗು ಗ್ರಾಮದಲ್ಲಿ ಪ್ರಥಮ ವರ್ಷದ ವಾಲಿಬಾಲ್ ಪಂದ್ಯಾವಳಿ ಯಶಸ್ವಿ

ಬಣಕಲ್ :ಚೇಗು ಗ್ರಾಮದಲ್ಲಿ ನಡೆದ ಪ್ರಥಮ ವರ್ಷದ ವಾಲಿಬಾಲ್ ಪಂದ್ಯಾವಳಿಯಲ್ಲಿ ಆಲಿಫ್ ಸ್ಟಾರ್ ಬಣಕಲ್ ತಂಡ ಪ್ರಥಮ ಸ್ಥಾನ ಪಡೆದು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ದ್ವಿತೀಯ ಸ್ಥಾನವನ್ನು ದಾಸರಹಳ್ಳಿ ತಂಡ, ತೃತೀಯ ಸ್ಥಾನವನ್ನು ಬಗ್ಗಸಗೋಡು ತಂಡ ಹಾಗೂ ಚತುರ್ಥ ಸ್ಥಾನವನ್ನು ಚೇಗು ಫ್ರೆಂಡ್ಸ್ ತಂಡ ಪಡೆದುಕೊಂಡಿವೆ.


ವೈಯಕ್ತಿಕ ಪ್ರಶಸ್ತಿಗಳು:
ಬೆಸ್ಟ್ ಅಟ್ಯಾಕರ್: ಆಕಾಶ್ (ಆಲಿಫ್ ಸ್ಟಾರ್ ಬಣಕಲ್)
ಬೆಸ್ಟ್ ಸೆಟ್ಟರ್: ನಿತಿನ್ (ದಾಸರಹಳ್ಳಿ)
ಬೆಸ್ಟ್ ಆಲ್‌ರೌಂಡರ್: ಮಹೇಶ್ (ಬಗ್ಗಸಗೋಡು)
ಬೆಸ್ಟ್ ಲಿಬ್ರೋ: ಅಜ್ಪಿತ್ (ಚೇಗು)


ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಸನ್ಮಾನ
ಇದೇ ಸಂದರ್ಭದಲ್ಲಿ ಹೈಸ್ಕೂಲ್ ವಿಭಾಗದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ಚಿನ್ನಿಗ ಗ್ರಾಮದ ಚೇತನ್ ಹಾಗೂ ದ್ವಿತೀಯ ಪಿಯುಸಿ ವಿಭಾಗದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ದಾಸರಹಳ್ಳಿಯ ಸೃಜನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪಂದ್ಯಾವಳಿಯಲ್ಲಿ ವಿಜೇತರಾದ ಎಲ್ಲಾ ತಂಡಗಳು ಹಾಗೂ ವೈಯಕ್ತಿಕ ಪ್ರಶಸ್ತಿ ಪಡೆದ ಆಟಗಾರರಿಗೆ ಮತ್ತು ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಆಯೋಜಕರು ಅಭಿನಂದನೆ ಸಲ್ಲಿಸಿದರು.


ಪಂದ್ಯಾವಳಿಯನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಿದ ಪೆಡ್ಡಿ ಲೋಬೊ ಹಾಗೂ ಅವರ ತಂಡಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ವರದಿ: ✍️ಸೂರಿ ಬಣಕಲ್