ಬಣಕಲ್ :ಟರ್ಫ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಪ್ ಪಂದ್ಯಾವಳಿಯಲ್ಲಿ ಬಣಕಲ್‌ನ ಮೌಸಿನ್ ಹಾಗೂ ಅಝಮ್ ಜೋಡಿಯು ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದು ಕಪ್ ತನ್ನದಾಗಿಸಿಕೊಂಡಿದೆ.
ಈ ಪಂದ್ಯಾವಳಿಯಲ್ಲಿ ಸುಮಾರು 40 ತಂಡಗಳು ಭಾಗವಹಿಸಿದ್ದು, ತೀವ್ರ ಪೈಪೋಟಿ ನಡೆದಿತ್ತು. ಆನಂದ್ ಹಾಗೂ ಮದು ಜೋಡಿ ದ್ವಿತೀಯ ಸ್ಥಾನ, ಅಗ್ನಯೇ ಹಾಗೂ ಸುಮಂತ್ ಜೋಡಿ ತೃತೀಯ ಸ್ಥಾನ ಮತ್ತು ಕೆಂಚಪ್ಪ ಹಾಗೂ ವಿಗ್ನೇಶ್ ಜೋಡಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.
ವಿಜೇತ ತಂಡಗಳಿಗೆ ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ