ಮನೆಯ ಹಿಂಭಾಗದಲ್ಲಿ ಕೊರೆಕ್ಸ್ ಬಾಟಲಿಗಳ ರಾಶಿ ಪತ್ತೆ; ಮನೆಯ ಮಾಲೀಕರ ಆತಂಕ ಕ್ರಮಕ್ಕೆ ಸ್ಥಳೀಯರ ಒತ್ತಾಯ

ಬಣಕಲ್: ಮನೆಯ ಹಿಂಭಾಗದಲ್ಲಿ ಕೊರೆಕ್ಸ್ ಸೇವಿಸಿ ಖಾಲಿ ಬಾಟಲಿಗಳನ್ನು ಎಸೆದು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.
ಮನೆಯ ಮಾಲೀಕರು ಮನೆಯ ಹಿಂಭಾಗದ ಬೇಲಿಯನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಸುಮಾರು ಹಲವು ಕೊರೆಕ್ಸ್ ಬಾಟಲಿಗಳು ಪತ್ತೆಯಾಗಿವೆ. ಕರ್ನಾಟಕ ಸ್ಟೋರ್ ಪಕ್ಕದಲ್ಲಿರುವ ನಾಡಕಚೇರಿಗೆ ತೆರಳುವ ರಸ್ತೆಯಲ್ಲಿನ ನಾಝಿಯಾ ಫುಟ್‌ವೇರ್ ಮನೆಯ ಹಿಂಭಾಗದಲ್ಲಿ ಈ ಬಾಟಲಿಗಳು ದೊರೆತಿವೆ.

ರಾತ್ರಿ ಸಮಯದಲ್ಲಿ ಈ ರಸ್ತೆಯಲ್ಲಿ ಕೆಲವು ವಾಹನಗಳು ಬಂದು ನಿಲ್ಲುತ್ತಿದ್ದು, ಈ ಪ್ರದೇಶದಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಸಂಜೆ ವೇಳೆ ಆ ಮಾರ್ಗದಲ್ಲಿ ಮಹಿಳೆಯರು ಮಕ್ಕಳು ತಿರುಗಾಡುತ್ತಿರುತ್ತಾರೆ.ಇದರಿಂದ ಭಯ ಪಡುವಂತಾಗಿದೆ ಎಂದು ಮನೆಯವರು ಆತಂಕ ವ್ಯಕ್ತಪಡಿಸಿದ್ದಾರೆ. ಪೊಲೀಸರು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.


ವರದಿ✍️ಸೂರಿ ಬಣಕಲ್