ಬಣಕಲ್ ನಿವಾಸಿ ಅಹ್ಮದ್ ಭಾವ ಅವರು ನಿಧನರಾಗಿ ವರ್ಷಗಳೇ ಕಳೆದಿದ್ದರೂ, ಜನರ ಮನಸ್ಸಿನಿಂದ ಅವರ ನೆನಪು ಮಾಸಿಲ್ಲ.
ಬಣಕಲ್ ಗ್ರಾಮದ ಬಂಡಿ ಮಠದಲ್ಲಿ ನೆಲೆಸಿದ್ದ ಮಹನೀಯರನ್ನು ಇಂದು ಪರಿಚಯಿಸಿಕೊಳ್ಳುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಅವರ ಜೀವನ, ಸೇವೆ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ.
ಮೂಡಿಗೆರೆ ತಾಲ್ಲೂಕ್ಕಿನ ಬಣಕಲ್ ಗ್ರಾಮದ ಬಂಡಿಮಠದಲ್ಲಿ ನೆಲೆಸಿದ್ದ ಅಹ್ಮದ್ ಭಾವ ಎಂದರೆ ಎಲ್ಲರಿಗೂ ಚಿರಪರಿಚಿತ ಹೆಸರು. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಅವರು ಸಮಾಜದಲ್ಲಿ ಸೌಹಾರ್ದತೆ ಬೆಳೆಸುವಲ್ಲಿ ಹಾಗೂ ಜನರ ನಡುವಿನ ವ್ಯಾಜ್ಯಗಳನ್ನು ತಮ್ಮ ಮನೆಯಲ್ಲಿಯೇ ಬಗೆಹರಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದರು. ಠಾಣೆಗೆ ಹೋಗಿ ಪರಿಹರಿಸಬೇಕಾದ ಹಲವು ಸಮಸ್ಯೆಗಳನ್ನು ಮಾತುಕತೆ ಮತ್ತು ಸಂಧಾನದ ಮೂಲಕ ಇತ್ಯರ್ಥಪಡಿಸುತ್ತಿದ್ದರು.
ತಮ್ಮ ಸರಳತೆ, ಮಾನವೀಯತೆ ಹಾಗೂ ಸಮಾಜಮುಖಿ ಸೇವೆಯ ಮೂಲಕ ಜನರ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿದ್ದ ಅಹ್ಮದ್ ಭಾವ ಅವರು ಇಂದು ನಮ್ಮೊಂದಿಗಿಲ್ಲದಿದ್ದರೂ, ಅವರು ಮಾಡಿದ ಸಮಾಜಸೇವೆ ಮತ್ತು ಜನರೊಂದಿಗಿನ ಒಡನಾಟದ ನೆನಪುಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ.
ಮನೆಯಲ್ಲಿ ಗಲಾಟೆ, ಹೊಡೆದಾಟ, ಬಡಿದಾಟ ನಡೆದು ಪೊಲೀಸ್ ಠಾಣೆ ಮೆಟ್ಟಿಲೇರಿದಾಗ, ಸಂಕಷ್ಟಕ್ಕೆ ಸಿಲುಕಿದವರಿಗೆ ನೆನಪಾಗುತ್ತಿದ್ದ ಹೆಸರೇ ಅಹ್ಮದ್ ಭಾವರವರು.
ಠಾಣೆಗೆ ಹೋದವರ ನೆರವಿಗೆ ಧಾವಿಸಿ, ಜಾಮೀನು (ಬೆಲ್) ಕೊಡಿಸಲು ಸಹಾಯ ಮಾಡುವ ಮೂಲಕ ಸಾವಿರಾರು ಜನರಿಗೆ ಆಸರೆಯಾಗಿದ್ದರು.
ಜಾತಿ ಭೇದವಿಲ್ಲದೆ ಬಡವ, ಶ್ರೀಮಂತ ಎನ್ನದೆ ಠಾಣೆಯ ಮೆಟ್ಟಿಲೇರಿದ ಪ್ರತಿಯೊಬ್ಬರಿಗೂ ನೆರವಿನ ಹಸ್ತ ಚಾಚುತ್ತಿದ್ದ ಅಹ್ಮದ್ ಭಾವ ಅವರು, ಸಾವಿರಾರು ಜನರಿಗೆ ಜಾಮೀನು ಕೊಡಿಸಿ ಸಂಕಷ್ಟದ ಸಮಯದಲ್ಲಿ ಆಸರೆಯಾಗಿದ್ದರು. ಮಾನವೀಯತೆಯೇ ಅವರ ಧರ್ಮವಾಗಿತ್ತು, ಸೇವೆಯೇ ಅವರ ಬದುಕಿನ ಗುರಿಯಾಗಿತ್ತು.
ಇಂದು ಅಹ್ಮದ್ ಭಾವ ಅವರು ನಮ್ಮೊಂದಿಗಿಲ್ಲ. ಆದರೆ, ಕಷ್ಟದಲ್ಲಿದ್ದವರಿಗೆ ನೆರವಾದ ಅವರ ಮಾನವೀಯ ಗುಣ, ಜನರೊಂದಿಗಿನ ಒಡನಾಟ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳು ಅವರನ್ನು ಇಂದಿಗೂ ಜನರ ಹೃದಯದಲ್ಲಿ ಜೀವಂತವಾಗಿರಿಸಿವೆ. ವರ್ಷಗಳು ಕಳೆದರೂ ಜನರ ನೆನಪಿನಿಂದ ಮಾಸದ ಅಹ್ಮದ್ ಭಾವ ಅವರ ಬದುಕು, ಸಮಾಜಸೇವೆಗೆ ಒಂದು ಸ್ಮರಣೀಯ ಉದಾಹರಣೆಯಾಗಿದೆ.
✍️ವರದಿ ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ