ಬಣಕಲ್ ಕ್ರೈಸ್ತರ ಅಭಿವೃದ್ಧಿ ಸಂಘ ಹಾಗೂ ಬಾಲಿಕ ಮರಿಯಾ ದೇವಾಲಯದ ವತಿಯಿಂದ ಕಳಸ ದಿವ್ಯ ಕಾರುಣ್ಯಾಲಯ ಅನಾಥಶ್ರಮಕ್ಕೆ ದವಸ ಧಾನ್ಯ ವಿತರಣೆ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಣಕಲ್ ಬಾಲಿಕ ಮರಿಯಾ ಚರ್ಚ್‌ (ದೇವಾಲಯ) ಹಾಗೂ ಬಣಕಲ್ ಕ್ರೈಸ್ತ ಅಭಿವೃದ್ಧಿ ಸಂಘದ ವತಿಯಿಂದ ಕಳಸ ತಾಲ್ಲೂಕಿನ ದೇವರಗುಡ್ಡದಲ್ಲಿರುವ ದಿವ್ಯ ಕಾರುಣ್ಯಾಲಯ ಅನಾಥಾಶ್ರಮ (ಟ್ರಸ್ಟ್) ಕ್ಕೆ ಉಚಿತವಾಗಿ ಅಕ್ಕಿ ತರಕಾರಿ, ಸಾಬೂನು, ಎಣ್ಣೆ, ಬಟ್ಟೆ, ಇನ್ನಿತರ ಉಪಯುಕ್ತ ಸಾಮಗ್ರಿಗಳನ್ನು ವಿತರಿಸಿದರು.


ಸಮಾಜದ ಅಸಹಾಯಕರು, ವೃದ್ಧರು ಮತ್ತು ಅನಾಥರ ಆಶ್ರಯ ತಾಣವಾಗಿರುವ ದಿವ್ಯ ಕಾರುಣ್ಯಾಲಯದ ನಿವಾಸಿಗಳ ದೈನಂದಿನ ಜೀವನೋಪಾಯಕ್ಕೆ ನೆರವಾಗುವ ನಿಟ್ಟಿನಲ್ಲಿ ಬಣಕಲ್ ಚರ್ಚ್ ಹಾಗೂ ಅದರ ಸದ್ಭಕ್ತರು ಈ ಮಾನವೀಯ ಮತ್ತು ಧರ್ಮಾರ್ಥ ಸೇವೆಯನ್ನು ಕೈಗೊಂಡಿದ್ದಾರೆ.
ಪ್ರಮುಖ ಸದಸ್ಯರ ಸಮ್ಮುಖದಲ್ಲಿ ಈ ದವಸ ಧಾನ್ಯ ವಿತರಣಾ ಕಾರ್ಯಕ್ರಮವು ನಡೆದಿದ್ದು, ಆಶ್ರಮದ ನಿರ್ವಾಹಕರು ಚರ್ಚ್‌ನ ಈ ಸತ್ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.


ವರದಿ ✍️ಸೂರಿ ಬಣಕಲ್