
ಬಣಕಲ್ :ಬಣಕಲ್ ಶ್ರಮ ಜೀವಿ ಆಟೋ ಚಾಲಕರು ಸ್ವಯಂಪ್ರೇರಿತರಾಗಿ ಸಾಮಾಜಿಕ ಸೇವೆ, ರಸ್ತೆ ದುರಸ್ತಿ, ಶುಚೀಕರಣ ಅಥವಾ ಸಾರ್ವಜನಿಕ ಹಿತಾಸಕ್ತಿಯ ಕಾರ್ಯಗಳಲ್ಲಿ ತಮ್ಮ ಸಮಯ ಮತ್ತು ಶ್ರಮವನ್ನು ಹಾಕುತಿರುತ್ತಾರೆ.

ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಬಣಕಲ್ ಶ್ರಮಜೀವಿ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ವತಿಯಿಂದ ಶ್ರಮಜೀವಿ ಸಂಘದ ಸದಸ್ಯರು ಮಂಗಳವಾರ ಆಟೋ ನಿಲ್ದಾಣ ಹಾಗೂ ಬಣಕಲ್ ನ ಸಾರ್ವಜನಿಕ ಬಸ್ ನಿಲ್ದಾಣದ ಮುಂಭಾಗ ಸ್ವಚ್ಛತೆಯನ್ನು ಮಾಡಿದ್ದಾರೆ.

ಬಣಕಲ್ ಸಾರ್ವಜನಿಕ ಬಸ್ ನಿಲ್ದಾಣದ ಒಳಗೆ ತಂಬಾಕು ಉಗುಳಿರುವುದು ತಂಗುದಾಣದ ಒಳಗೆ ಮೂತ್ರ ವಿಸರ್ಜನೆ ಕೂಡ ಮಾಡಿರಿವುದು ಕಂಡುಬಂದಿದೆ. ಸಾರ್ವಜನಿಕರಿಗೋಸ್ಕರ ಇರುವಂತಹ ಬಸ್ ತಂಗುದಾಣ ಶುಚಿತ್ವಇಲ್ಲದೆ ದುರ್ವಾಸನೆ ಬರುತ್ತಿತ್ತು.ಆಟೋ ಸಂಘದ ಸದಸ್ಯರು ನೀರನ್ನು ಹಾಕಿ ಸ್ವಚ್ಛ ಮಾಡಿದ್ದಾರೆ. ಆಟೋ ಚಾಲಕರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ ✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ