ಬಣಕಲ್ ಸುಭಾಶ್ ನಗರದ ಹೆಚ್.ಎಂ ಸತೀಶ್ (62)ಎಂಬುವವರು ಕಳಸದ ಹಳುವಳ್ಳಿ ಬಳಿಯ ಕೊಂಡದಮನೆ ಎಂಬಲ್ಲಿ ಬೈಕ್ ನಿಲ್ಲಿಸಿ ಸೋಮವಾರದಿಂದ ಕಾಣೆಯಾಗಿದ್ದರು ಈ ಬಗ್ಗೆ ಕಳಸ ಹಾಗೂ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಿನ್ನೆ ಕಳಸ ತಾಲ್ಲೂಕಿನ ಹಳುವಳ್ಳಿ ಬಳಿಯ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದೆ.ಕಳಸ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.ಬಣಕಲ್ ಆರೀಫ್ ಅವರ ತಂಡ ಮೃತದೇಹವನ್ನು ಕೆಳಗಿಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ವರದಿ ✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ