ದೇವರ ಮನೆಯಲ್ಲಿ ಕೆರೆಗೆ ಬಿದ್ದು ಜಾನುವಾರು ಸಾವು:ಆರೀಫ್ ತಂಡದಿಂದ ಕಾರ್ಯಾಚರಣೆ

ಬಣಕಲ್ :ಮೇಯಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದು ಜಾನುವಾರು ಮೃತಪಟ್ಟ ಘಟನೆ ದೇವರ ಮನೆ ಕೆರೆಯಲ್ಲಿ ನಡೆದಿದೆ

ದನಗಳು ನೀರು ಕುಡಿಯಲು, ಮೇಯಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿತ್ತು
ಕೊಳೆತ ಸ್ಥಿತಿಯಲ್ಲಿದ್ದ ದನದ ಕಳೆಬರಹ ಕೆರೆಯ ಮಧ್ಯಭಾಗದಲ್ಲಿ ತೆಲಾಡುತಿತ್ತು. ಮಳೆಗಾಲವಾದರಿಂದ ಕೆರೆ ತುಂಬಾ ನೀರು ತುಂಬಿತ್ತು ದನದ ಕಳೆಬರಹವನ್ನು ಮೇಲಕ್ಕೆ ಎತ್ತಲು ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು ಸಮಾಜ ಸೇವಕ ಆರೀಫ್ ಅವರಿಗೆ ತಿಳಿಸಿದ್ದಾರೆ.


ಸ್ಥಳಕ್ಕೆ ತೆರಳಿದ ಆರೀಫ್ ಅವರ ತಂಡದ ಸದಸ್ಯ ರಮ್ಲಾ ಲೈಫ್ ಜಾಕೆಟ್ ಧರಿಸಿಕೊಂಡು ಹಗ್ಗದ ಸಹಾಯದೊಂದಿಗೆ ನೂರು ಮೀಟರ್ ವರೆಗೆ ಈಜುತ್ತಾ ಸಾಗಿ ಕೊಳೆತ ಸ್ಥಿತಿಯಲ್ಲಿ ಇದ್ದ ದನವನ್ನು ಮೇಲಕ್ಕೆ ತಂದಿದ್ದಾರೆ.

ಕಾರ್ಯಾಚರಣೆಗೆ ಸಹಕರಿಸಿದ ಆರೀಫ್ ತಂಡದ ರಮ್ಲ.ಹರೀಶ್.ಫಹದ್ ರವರಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.


ವರದಿ ✍️ಸೂರಿ ಬಣಕಲ್