ಸಹಾಯ ಮಾಡಲು ಹಣವೆ ಬೇಕೆಂದಿಲ್ಲ ಮನಸಿದ್ದರೆ ಸಾಕು:ಮೌಸಿನ್ ಬಣಕಲ್

ಬಣಕಲ್ : ತಮ್ಮ ಸ್ನೇಹಿತ ಬ್ಯಾಡ್ಮಿಂಟನ್ ಆಟಗಾರನಾದ ಸಚಿನ್ ಬೈಕ್ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದು icu ನಲ್ಲಿ ನರಳಾಡುತಿರುಹುದನ್ನು
ಗಮನಿಸಿದ ಸ್ನೇಹಿತರ ತಂಡ ಬೇಲೂರ್ ಬ್ಯಾಡ್ಮಿಂಟನ್ ಕ್ಲಬ್ನಲ್ಲಿ ಟ್ಯೂರ್ಲಿಮೆಂಟ್ ನಡೆಸಿ ಬಂದಂತಹ ಹಣವನ್ನು ಸ್ನೇಹಿತನ ಚಿಕಿತ್ಸೆಗೆ ನೀಡಿ ಸಹಕರಿಯಾಗಿದ್ದಾರೆ.

ದ್ವಿತೀಯ ಸ್ಥಾನ ಪಡೆದು ಮಾತನಾಡಿದ ಬಣಕಲ್ ಅರಣ್ಯ ಇಲಾಖೆಯ ಸಿಬ್ಬಂದಿ ಮೌಸಿನ್ ಸಹಾಯ ಹಸ್ತ ಮಾಡಲು ಕೈ ಅಲ್ಲಿ ಹಣ ಇರಬೇಕೆಂದಿಲ್ಲ ಮನಸಿದ್ದರೆ ಸಾಕು ಯಾವುದೆ ರೂಪದಲ್ಲಾದರೂ ಸಹಾಯ ಮಾಡಬಹುದು ಆಟ ಬರಿ ಆಟ ಆಗಬಾರದು ಆಟದಿಂದ ನಾಲ್ಕು ಜನಕ್ಕೆ ಸಹಾಯವಾದರೆ ನಾವು ಕಲಿತಿದಕ್ಕೂ ಒಂದು ಬೆಲೆ ಇದೆ ಎಂದರು.

ಆಟಗಾರರ ಈ ಗುಣಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ