ವಿಷು ಹಬ್ಬದ ಪ್ರಯುಕ್ತ ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಬಾಂಧವರಿಂದ ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣುಹಂಪಲು ವಿತರಣೆ

ಬಣಕಲ್ :ಮಲಯಾಳಿ ಬಾಂಧವರು ವಿಶೇಷವಾಗಿ ವಿಷು ಅಥವಾ ಓಣಂ ಹಬ್ಬದ ಸಂದರ್ಭದಲ್ಲಿ ರೋಗಿಗಳಿಗೆ ಮತ್ತು ಬಡವರಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ತಮ್ಮ ಸೇವಾ ಮನೋಭಾವವನ್ನು ಮೆರೆಯುತ್ತಾರೆ.

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವಿಷು ಹಬ್ಬದ ಪ್ರಯುಕ್ತ ಬಣಕಲ್ ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಸದಸ್ಯರು ಮೂಡಿಗೆರೆಯ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.

ಆಸ್ಪತ್ರೆಗಳಲ್ಲಿನ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸುವುದು ಒಂದು ಮಾನವೀಯ ಮತ್ತು ಸಾಮಾಜಿಕ ಸೇವಾ ಕಾರ್ಯಕ್ರಮವಾಗಿದೆ. ರೋಗಿಗಳ ಕಷ್ಟಗಳಿಗೆ ಸ್ಪಂದಿಸುವುದು ಮತ್ತು ಅವರೊಂದಿಗೆ ಹಬ್ಬದ ಸಂತೋಷವನ್ನು ಹಂಚಿಕೊಳ್ಳುವುದು ಈ ಸೇವೆಯ ಮುಖ್ಯ ಉದ್ದೇಶವಾಗಿದೆ ಎಂದು ನಾರಾಯಣ ಗುರು ಮಲಯಾಳಿ ಸಂಘದ ಅಧ್ಯಕ್ಷ ರಾಮಣ್ಣ ಹೇಳಿದರು.

ರೋಗಿಗಳಿಗೆ ಹಣ್ಣುಗಳನ್ನು ನೀಡುವುದರ ಜೊತೆಗೆ ಬೇಗ ಗುಣಮುಖವಾಗಲೆಂದು ಹಬ್ಬದ ಶುಭಾಶಯಗಳನ್ನು ಹಂಚಿಕೊಂಡರು.
ರೋಗಿಗಳಿಗೆ ಅಗತ್ಯವಾದ ತಾಜಾ ಹಣ್ಣುಗಳನ್ನು ವಿತರಿಸುವ ಮೂಲಕ ಆರೋಗ್ಯದ ಬಗ್ಗೆ ಕಾಳಜಿ ತೋರಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರು ರಾಮಚಂದ್ರ,ಪ್ರಧಾನಕಾರ್ಯದರ್ಶಿ ರವಿ,BR ಮಜನುನಾಥ್ ನಂದೀಶ್ ಶುನಿಲ್ ಕುಮಾರ್ ದೀಕ್ಷಿ ಅಭಿಲಾಷ್ ಯಶೋದಾ ಶಿಲ್ಪಾ ಮಣಿಕಂಠ
ವೇಲಾಯಿದಾನ್ ಸೂರಿ ಇದ್ದರು


ವರದಿ :✍️ಸೂರಿ ಬಣಕಲ್