ಸರಿಯಾದ ಸಮಯಕ್ಕೆ ಬಾರದ ಬಸ್ ಬಂದರೂ ರಸ್ತೆಯಲ್ಲೆ ಕೆಟ್ಟು ನಿಲ್ಲುತ್ತಿರುವ ಬಸ್ ಮತ್ತಿಕಟ್ಟೆ ಬಾಳೂರು ಹೆಗ್ಗುಡ್ಲು ಭಾಗದ ವಿದ್ಯಾರ್ಥಿಗಳಿಗೆ ಸಮಸ್ಯೆ

ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿದಿನ ಬಸ್ ಕೊರತೆಯಿಂದ ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ತೆರಳಲು ಪರದಾಡುತ್ತಿದ್ದು, ಇದರಿಂದ ಅವರ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ಸರಿಯಾದ ಸಮಯಕ್ಕೆ ಬಸ್ ಬಾರದ ಕಾರಣ ಅನೇಕ ವಿದ್ಯಾರ್ಥಿಗಳು ತರಗತಿಗಳಿಗೆ ಗೈರುಹಾಜರಾಗುತ್ತಿದ್ದಾರೆ, ಇದು ಅವರ ಕಲಿಕೆಯ ಮೇಲೆ ನಕಾರಾತ್ಮಕ ಪ್ರಭಾವ ಬೀರಲಿದೆ. ವಾರದಲ್ಲಿ ಎರಡು ಮೂರು ದಿನ ಮಾತ್ರ ಬಸ್ ಬೆಳಗ್ಗೆ ಬರುತ್ತಿವೆ ಉಳಿದ ದಿನಗಳು ಬಸ್ ಬರುವುದಿಲ್ಲ ಬಂದರೂ ಹಳೆಯ ಬಸ್ ಕೆಟ್ಟು ಎಲ್ಲೆಂದರಲ್ಲಿ ನಿಲ್ಲುತ್ತಿವೆ.

ಬಾಳೂರು ಮತ್ತಿಕಟ್ಟೆ ಹೆಗ್ಗುಡ್ಲು ಭಾಗದ ವಿದ್ಯಾರ್ಥಿಗಳು ಸಮಯ ಮೀರಿದಾಗ ಕೆಲ ವಿದ್ಯಾರ್ಥಿಗಳು ಖಾಸಗಿ ವಾಹನದಲ್ಲಿ ಬರುತ್ತಾರೆ ಇನ್ನೂ ಕೆಲ ವಿದ್ಯಾರ್ಥಿಗಳು ಶಾಲೆಗೆ ಹೋಗದೇ ಮನೆಗಳಿಗೆ ತೆರಳುತ್ತಿದ್ದಾರೆ. ಈ ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಶಾಲಾ ಶಿಕ್ಷಕಿ ಅಶ್ವಿತ ಅಳಲು ತೋಡಿಕೊಂಡಿದ್ದಾರೆ.

ಪರೀಕ್ಷಾ ಸಮಯವಾದರಿಂದ ಮಕ್ಕಳಿಗೆ ಕಲಿಕಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಯಾಕೆ ಯಾರು ಗಮನ ಹರಿಸುತ್ತಿಲ್ಲ ಎಂದು ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಳೂರು ಮತ್ತಿಕಟ್ಟೆ ಹೆಗ್ಗುಡ್ಲು ಬಾಗದಿಂದ ನೂರಾರು ವಿದ್ಯಾರ್ಥಿಗಳು ಬಣಕಲ್ ಶಾಲೆಗಳಿಗೆ ಬರುತ್ತಾರೆ. ಹೆಚ್ಚಾಗಿ ಕೂಲಿ ಕಾರ್ಮಿಕರ ಮಕ್ಕಳೇ ಇದ್ದಾರೆ. ಪ್ರತಿದಿನ ಖಾಸಗಿ ವಾಹನದಲ್ಲಿ ಹೋಗಲು ಆಗುವುದಿಲ್ಲ ದಯವಿಟ್ಟು ಜನ ಪ್ರತಿನಿಧಿಗಳು ಇದರ ಬಗ್ಗೆ ಗಮನ ಹರಿಸಿ ಪರಿಹಾರ ಒದಗಿಸಬೇಕು ಉತ್ತಮ ಗುಮಟ್ಟದ ಬಸ್ ಕಳಿಸಿಕೊಡಬೇಕು ಎಂದು ಬಾಳೂರು ಗ್ರಾಮಸ್ಥ ತಾರಾನಾಥ್ ಒತ್ತಾಯಿಸಿದ್ದಾರೆ.