ಬಣಕಲ್ : ಗ್ರಾಮದ ಗುಡ್ಡಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ನೆನ್ನೆ ಹಬ್ಬದ ವಾತಾವರಣ ಶೃಷ್ಠಿ ಮಾಡುವ ಮೂಲಕ ಹಳೆ ವಿದ್ಯಾರ್ಥಿಗಳು 21ವರುಷದ ತಮ್ಮ ಆಸೆಯೊಂದನ್ನು ತಾವೆ ನೆರವೇರಿಸಿಕ್ಕೊಂಡರು.
2004ರಲ್ಲಿ ಜನ್ಮ ಪಡೆದ ಈ ವಿದ್ಯಾಮಂದಿರಕ್ಕೆ 21ವರುಷವಾಗಿದೆ, ಈ ಕಾಲವದಿಯಲ್ಲಿ ಸೇವೆ ಸಲ್ಲಿಸಿದ ಎಲ್ಲಾ ಶಿಕ್ಷಕರಿಗೂ ಬೀಳ್ಕೊಡುಗೆ ಕೊಡಬೇಕೆಂಬ ಹಲವು ವರುಷಗಳ ಕನಸು ನನಸು ಮಾಡುವಲ್ಲಿ ಗುಡ್ಡಹಟ್ಟಿ ಶಾಲೆಯ ಹಳೆವಿದ್ಯಾರ್ಥಿಗಳು ಯಶಸ್ಸನ್ನು ಕಂಡಿದ್ದಾರೆ.
ಹಳೆ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್ ಮಾಡಿ ಎಲ್ಲರ ಸಂಪರ್ಕ ಪಡೆದು ಊರಿನವರ ಸಹಕಾರದೊಂದಿಗೆ ಹಾಲಿ ಶಿಕ್ಷಕಿ ಶ್ರೀಮತಿ ಶೀನಾ ಸುಲ್ತಾನ ಅವರ ಸಲಹೆಯೊಂದಿಗೆ ಗುರುವಂದನೆ ಹಾಗೂ ಸಾಮೂಹಿಕ ಬೀಳ್ಕೊಡುಗೆ ಸಮಾರಂಭ ವನ್ನು ಏರ್ಪಡಿಸಿ ತಮಗೆ ವಿದ್ಯೆ ದಾನ ಮಾಡಿದ ಶಿಕ್ಷಕರಾದ ಪೂರ್ಣೇಶ್, ಭರತ್ ರೆಡ್ಡಿ, ಜಯಣ್ಣ, ಭಾಗ್ಯ, ಲೋಕೇಶ್, ರಾಮಣ್ಣ, ಫ್ಲೋರಿನ, ಕವಿತಾ ಇವರಿಗೆ ಸನ್ಮಾನಿಸಿ ಊರಿನವರಿಗೆಲ್ಲ ಸಿಹಿ ಊಟವನ್ನು ಬಡಿಸಿದರು.
sdmc ಅಧ್ಯಕ್ಷರಾದ ಸುಂದರ ಅವರು ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾಪಂಚಾಯತ್ ಉಪಾಧ್ಯಕ್ಷರಾದ ರಾಜಮ್ಮ ವಿದ್ಯಾರ್ಥಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷರು ರಮೇಶ್ ಗೌಡ್ರು ಮಾತಾಡಿ ಶಾಲೆಯ ಬೆಳವಣಿಗೆಗೆ ಶಿಕ್ಷಕರ ಪಾತ್ರ ಬಹುಮುಖ್ಯವಾದುದ್ದು ಇಲ್ಲಿ ಸೇವೆ ಸಲ್ಲಿಸಿದ ಎಲ್ಲಾ ಶಿಕ್ಷಕರು ಶಾಲೆಯ ಅಭಿವೃದ್ಧಿ ಗೆ ಶ್ರಮವಹಿಸಿದ್ದಾರೆ ಅವರ ಮುಂದಿನ ಜೀವನ ಸುಖವಾಗಿರಲಿ ಎಂದು ಹಾರೈಸಿದರು.
ಶಿಕ್ಷಕರಾದ ರಾಮಣ್ಣ ಮಾತನಾಡಿ ಸರ್ಕಾರಿ ಶಾಲೆಯ ಉಳಿಸಲು ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಶಾಲೆಯ ಅಭಿವೃದ್ಧಿ ಯಲ್ಲಿ ಭಾಗಿಯಾಗಬೇಕೆಂದು ಕೇಳಿಕ್ಕೊಂಡರು.
ಹಳೆ ವಿದ್ಯಾರ್ಥಿಗಳಾದ ಪ್ರದೀಪ್, ಸುಮಲತಾ ಮತ್ತು ಮನೋಜ್ ತಮ್ಮ ವಿದ್ಯಾರ್ಥಿ ಜೀವನದ ಹಳೆ ನೆನಪುಗಳನ್ನು ನೆನಪಿಸಿಕ್ಕೊಂಡು ಶಿಕ್ಷಕರ ಬಗ್ಗೆ ಗೌರವವ್ಯಕ್ತಪಡಿಸಿದರು
ಕಾರ್ಯಕ್ರಮದಲ್ಲಿ ಗ್ರಾಮಪಂಚಾಯಿತಿ ಸದಸ್ಯೆ ರೇಣುಕಾ, sdmc ಸದಸ್ಯರಾದ ರವಿ,ಮನೋಜ್, ಹರೀಶ್. ಅಂಗನವಾಡಿ ಶಿಕ್ಷಕಿ ಗೀತಾ, ಆಶಾ ಕಾರ್ಯಕರ್ತೆ ವಿಮಲಾಕ್ಷಿ, ಪೋಷಕರಾದ ಕೃಷ್ಣ, ಬೇಬಿ, ಸವಿತಾ ಊರಿನ ಸಮಸ್ತ ಗ್ರಾಮಸ್ಥರು ಹಾಜರಿದ್ದರು
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ