ಶ್ರೀ ವಿದ್ಯಾ ಭಾರತಿ ವಿದ್ಯಾಸಂಸ್ಥೆ ಬಣಕಲ್ ಇವರಿಂದ ಅರೋಗ್ಯದೆಡೆಗೆ ನಮ್ಮ ಅಡುಗೆ ಸ್ಪರ್ಧೆ

ಶ್ರೀ ವಿದ್ಯಾ ಭಾರತಿ ವಿದ್ಯಾಸಂಸ್ಥೆ ( ರಿ) ಬಣಕಲ್.ಮೂಡಿಗೆರೆ ತಾಲ್ಲೂಕು ಇಲ್ಲಿ ದಿನಾಂಕ:06:12:2025 ಶನಿವಾರದಂದು 39ನೇ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ನಡೆದ ಆರೋಗ್ಯದೆಡೆಗೆ ನಮ್ಮ ಅಡುಗೆ ಸ್ಪರ್ಧೆ ನಡೆಯಿತು.


ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ.ಶಿವರಾಮ ಶೆಟ್ಟಿ ವಹಿಸಿದ್ದರು.ಕಾರ್ಯಕ್ರಮದ ಅತಿಥಿ ಹಾಗೂ ತೀರ್ಪುಗಾರರಾಗಿ ಆಗಮಿಸಿದ ಅನ್ನಪೂರ್ಣ ಪಾಲಿಕ್ಲೀನಿಕ್ ಕಡಬ, ವೈದ್ಯರಾದ ಶ್ರೀಮತಿ ಡಾIIಗ್ರೀಷ್ಮ ಅರ್ನೋಜಿ ಮಾತನಾಡಿ ಮನೆಯ ಆರೋಗ್ಯವನ್ನು ಕಾಪಾಡುವಲ್ಲಿ ತಾಯಂದಿರ ಪಾತ್ರ ಮಹತ್ವದ್ದಾಗಿದೆ. ಪ್ರತೀ ಮನೆಯಲ್ಲಿ ತಾಯಂದಿರು ತಯಾರಿಸುವ ಆಹಾರ ಪದಾರ್ಥಗಳು ಔಷಧಿಯುಕ್ತ ಆಹಾರವಾದರೆ ಆ ಕುಟುಂಬ ಆರೋಗ್ಯವಾಗಿರುತ್ತದೆ ಮತ್ತು ಪ್ರತಿಯೊಬ್ಬರು ಆಹಾರವನ್ನು ನಿಯಮಿತವಾಗಿ ಸೇವಿಸಿದಾಗ ಮಾತ್ರ ತಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇರಿಸಿಕೊಳ್ಳಲು ಸಾಧ್ಯ ಎಂದರು.

ಸರ್ಕಾರಿ ಆಸ್ಪತ್ರೆ ಅರಸಿಕೆರೆಯ ಆಯುರ್ವೇದ ಪ್ರಸೂತಿ ತಜ್ಞರಾದ ಶ್ರೀಮತಿ ಡಾII ಕಾವ್ಯ ಕಿರಣ್ ಮಾತನಾಡಿ ಇಂತಹ ಕಾರ್ಯಕ್ರಮಗಳು ಪ್ರಸ್ತುತ ಸಮಾಜಕ್ಕೆ ಅತ್ಯಂತ ಪೂರಕವಾಗಿದೆ, ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಪ್ರತೀವರ್ಷ ಆಯೋಜಿಸುತ್ತಿರುವ ವಿದ್ಯಾ ಸಂಸ್ಥೆಯು ಶಿಕ್ಷಣದ ಜೊತೆಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ ಎಂದರು.


ಹೊಯ್ಸಳ ಹೆಲ್ತ್ ಸೆಂಟರ್ ಮೂಡಿಗೆರೆಯ ವೈದ್ಯರಾದ ಡಾII ಶಶಿಕುಮಾರ್ ತೀರ್ಪುಗಾರರಾಗಿ ಆಗಮಿಸಿದ್ದರು.
ಸ್ಪರ್ಧೆಯಗೆ ಒಟ್ಟು 36 ಮಹಿಳಾ ಪೋಷಕರು ಭಾಗವಹಿಸಿ ತಮ್ಮ ಮನೆಯ ಸುತ್ತ ಮುತ್ತಲಿನಲ್ಲಿ ಲಭ್ಯವಿರುವ ಔಷಧಿಯುಕ್ತ ಪದಾರ್ಥಗಳನ್ನು ಬಳಸಿ ತಯಾರಿಸಿದ ಆಹಾರ ಪದಾರ್ಥಗಳನ್ನು ಪ್ರದರ್ಶನ ಮಾಡಿ ಅದರಲ್ಲಿರುವ ಆರೋಗ್ಯಕರ ಅಂಶಗಳು ಮತ್ತು ತಯಾರಿಸುವ ವಿಧಾನವನ್ನು ತಿಳಿಸಿದರು.ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮತ್ತು ಭಾಗವಹಿಸಿದ ಎಲ್ಲಾ ಪೋಷಕರಿಗೆ ಶಾಲಾ ವಾರ್ಷಿಕೋತ್ಸವದಲ್ಲಿ ಮನೆ ವೈದ್ಯರು ಎಂಬ ಪ್ರಮಾಣ ಪತ್ರದೊಂದಿಗೆ ಗೌರವಿಸಲಾಗುವುದು

ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಕೋಶಾಧಿಕಾರಿ ಯು.ಪಿ.ರಾಮಚಂದ್ರ ಹೊಳ್ಳ. ಕಾರ್ಯದರ್ಶಿ ಡಿ.ಪಿ. ಲಿಂಗಪ್ಪ. ಕೋಶಾಧಿಕಾರಿ ಯು.ಪಿ.ರಾಮಚಂದ್ರ ಹೊಳ್ಳ.ಪ್ರೌಢಶಾಲಾ ಮುಖ್ಯ ಶಿಕ್ಷಕಿ ಟಿ.ಆರ್.ಮಾಲತಿ. ಪ್ರಾಥಮಿಕ ಶಾಲಾ ಮಾಖ್ಯ ಶಿಕ್ಷಕ ಸಿ.ನಾಗರಾಜು. ಪ್ರೌಢಶಾಲಾ ವಿಭಾಗದ ಉಪ ಮುಖ್ಯಶಿಕ್ಷಕ ವಸಂತ್ ಹಾರ್ಗೋಡು.ಶಿಕ್ಷಕರಾದ ಭಕ್ತೇಶ್.ಶೇಖರಪ್ಪ.ವಿಜಯೇಂದ್ರ.ಅಶ್ವತ್.ಲೋಕೇಶ್.ಲಿಂಗರಾಜು.ಪ್ರತಾಪ್.ನೃತ್ಯ ಶಿಕ್ಷಕ ಕಿಶೋರ್.ಲೀಲಾಮಣಿ.ಗೀತಾ.ಕಮಲಮ್ಮ.ಪದ್ಮಶ್ರೀ.ಅಶ್ವಿತಾ.ಆಶಾ.ಪೂಜಾ.ಅನುಷ.ಕನ್ನಿಕಾ.ಸಂಗೀತ.ಪ್ರೀತಿ.ಚಂದನ.ಆರೋಗ್ಯವಾಣಿ.ಸುಶ್ಮಿತಾ.ಸಿಬ್ಬಂದಿವರ್ಗ.ಅಡುಗೆಸಿಬ್ಬಂದಿ.ವಿದ್ಯಾರ್ಥಿಗಳು.ಮತ್ತು ಪೋಷಕರು ಭಾಗವಹಿಸಿದ್ದರು.