ಬಣಕಲ್: ದಿನಾಂಕ 18.11.2025 ರಂದು ಬಣಕಲ್ ನಲ್ಲಿ ಅನಾಥವಾಗಿ ಸಿಕ್ಕಿದ ಸುಮಾರು 55 ವರ್ಷದ ವ್ಯಕ್ತಿಯನ್ನು ಮೂಡಿಗೆರೆ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯ ಉಪಾಧ್ಯಕ್ಷರಾದ ಮೊಹಮ್ಮದ್ ಅರಿಫ್ ಬಣಕಲ್ ರವರು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು.ದಿನಾಂಕ 25 .11.2025 ರಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತರಾಗಿದ್ದರು ವಾರಸುದಾರರು ಪತ್ತೆಯಾಗದ ಕಾರಣ ದಿನಾಂಕ 29.11.2025 ರಂದು ಕಾನೂನು ಕ್ರಮ ಜರುಗಿಸಿ ಮೂಡಿಗೆರೆ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯ ಗೌರವ ಅಧ್ಯಕ್ಷರಾದ ಅಬ್ದುಲ್ ರೆಹಮಾನ್ ಅಧ್ಯಕ್ಷರಾದ ಫಿಶ್ ಮೋನು ಉಪಾಧ್ಯಕ್ಷರಾದ ಮೊಹಮ್ಮದ್ ಅರಿಫ್ ಬಣಕಲ್ , ನವೀನ್ ಗುಡ್ಡಟ್ಟಿ, ಹೇಮರಾಜು, ಬಣಕಲ್ ಠಾಣೆಯ ಸಹಾಯಕ ಆರಕ್ಷಕ ಉಪನಿರೀಕ್ಷಕರಾದ ರವಿ ಮತ್ತು ಸಿಬ್ಬಂದಿ ನಾಗಪ್ಪ ರವರ ಸಮ್ಮುಖದಲ್ಲಿ ಬಣಕಲ್ ನ ಹಿಂದೂ ರುದ್ರ ಭೂಮಿಯಲ್ಲಿ ಶವ ಸಂಸ್ಕಾರ ಮಾಡಲಾಯಿತು.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ