ಬಣಕಲ್ :ಚಕ್ಕಮಕ್ಕಿ ಗ್ರಾಮದ ಪ್ರಗತಿಪರ ವ್ಯಕ್ತಿಯಾಗಿದ್ದ ದಿವಂಗತ ರಫೀಕ್ ಬಿ.ಎ. ಅವರ ಪುತ್ರ ಮೊಹಮ್ಮದ್ ನಹೀಮ್, ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯ, ಮೂಡಬಿದ್ರೆಯ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್(ಡೇಟಾ ಸೈನ್ಸ್) ವಿಭಾಗದ ವಿದ್ಯಾರ್ಥಿ ಸಂಘ ‘ಡೇಟಾನೋವಾ’ ದ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.
ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ರಚಿಸಿರುವ ಈ ವಿದ್ಯಾರ್ಥಿ ಸಂಘಕ್ಕೆ ನಹೀಮ್ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಭವಿಷ್ಯದಲ್ಲಿ ಸಂಘದ ವಿವಿಧ ಕಾರ್ಯಕ್ರಮಗಳು, ತಾಂತ್ರಿಕ ಕಾರ್ಯಾಗಾರಗಳು ಹಾಗೂ ಸಮಾಜಮುಖಿ ಚಟುವಟಿಕೆಗಳನ್ನು ಮುಂದಿಟ್ಟು ವಿದ್ಯಾರ್ಥಿಗಳನ್ನು ಉತ್ತೇಜಿಸುವ ಜವಾಬ್ದಾರಿಯನ್ನು ನಹೀಮ್ ಹೊತ್ತುಕೊಳ್ಳಲಿದ್ದಾರೆ.
ನಹೀಮ್ ಅವರ ಈ ಸಾಧನೆಗೆ ಚಕ್ಕಮಕ್ಕಿ ಗ್ರಾಮಸ್ಥರು, ಸ್ನೇಹಿತರು ಮತ್ತು ಗುರುವರು ಅಭಿನಂದನೆ ವ್ಯಕ್ತಪಡಿಸಿದ್ದಾರೆ.
ವರದಿ ✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ