ಬಣಕಲ್ :ಅಪಘಾತಗಳಾದ ತುರ್ತು ಸಂದರ್ಭದಲ್ಲಿ ತಕ್ಷಣ ಸ್ಥಳಕ್ಕೆ ದಾವಿಸಿ ಜನರ ಪ್ರಾಣ ಉಳಿಸಲು ಶ್ರಮಿಸುವ ಆಂಬುಲೆನ್ಸ್ ಚಾಲಕರ ಕಾರ್ಯ ಶ್ಲಾಘನಿಯ. ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸುವುದರ ಜೊತೆಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸೇವೆ ಸಲ್ಲಿಸಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಬಣಕಲ್ ಆಂಬುಲೆನ್ಸ್ ಚಾಲಕ ರವೀಂದ್ರ ಅವರಿಗೆ ತಾಲೂಕಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಆಂಬುಲೆನ್ಸ್ ಚಾಲಕರಿಗೆ ಸಂತೋಷ ತಂದಿದೆ.
ಆಸ್ಪತ್ರೆ, ಅಂಬ್ಯುಲೆನ್ಸ್ ಈಗ ಏನಿದ್ದರೂ ಬರೀ ಉದ್ಯೋಗ ಮಾತ್ರವಾಗಿದೆ. ಅಲ್ಲಿ ಮಾನವೀಯತೆಯುಳ್ಳವರು ಸಿಗುವುದು ಬಹಳ ಕಡಿಮೆ. ಸಿಕ್ಕರೂ ಬೆರಳೆಣಿಕೆಯ ಒಂದಷ್ಟು ಜನ ಮಾತ್ರ ಅಂತಹ ಮಾನವೀಯತೆಯ ಉದಾರವಾದಿ ಮನಸ್ಸಿನ ಬಣಕಲ್ ಆಂಬುಲೆನ್ಸ್ ಚಾಲಕ ರವೀಂದ್ರ ರವರಿಗೆ ಈ ಬಾರಿಯ ಮೂಡಿಗೆರೆ ತಾಲೂಕಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರುವುದು ಬಹಳ ಸಂತೋಷದ ವಿಷಯ. ರಾಜ್ಯೋತ್ಸವ ಪ್ರಶಸ್ತಿಗಳನ್ನು ಬಹುತೇಕ ಅರ್ಹರಿಗೆ ನೀಡಿ ಪ್ರೋತ್ಸಾಹಿಸಿರುವುದು ಅವರ ಸೇವೆಗೆ ಲಭಿಸಿದ ಗರಿಮೆ.
ವರದಿ ✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ