ಭಾರತೀಯ ಜನತಾ ಪಾರ್ಟಿ, ಬಣಕಲ್ ಮಹಾಶಕ್ತಿ ಕೇಂದ್ರದ ವತಿಯಿಂದ ಇಂದು ದೇಶದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಅವರ ಜನ್ಮ ದಿನಾಚರಣೆಯ ಪ್ರಯುಕ್ತ “ಸೇವಾ ಪಕ್ಷಿಕ” ಕಾರ್ಯಕ್ರಮಕ್ಕೆ ಲಕ್ಷ್ಮಣ ಫಲ ಗಿಡವನ್ನು ಬಣಕಲ್ ಸುಭಾಷ್ ನಗರದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ನೆಡುವ ಮೂಲಕ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಬಣಕಲ್ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಶ್ರೀ ಯತೀಶ್ ಕೂಡಹಳ್ಳಿ, ಪ್ರಧಾನ ಕಾರ್ಯದರ್ಶಿಗಳಾದ ಶರತ್ ಫಲ್ಗುಣಿ ಮತ್ತು ಸಾಗರ್ ಹುಲ್ಲೇಮನೆ, ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀ ಟಿ ಎಂ ಗಜೇಂದ್ರ, ಜಿಲ್ಲಾ ಓಬಿಸಿ ಮೋರ್ಚಾ ಸಮಿತಿ ಸದಸ್ಯರಾದ ಸುರೇಶ್ ಪೂಜಾರಿ, ಮಹಾಶಕ್ತಿ ಕೇಂದ್ರದ ಉಪಾಧ್ಯಕ್ಷರಾದ ಲಕ್ಷ್ಮಣ್ ಕುಂದೂರು ಮತ್ತು ಪ್ರದೀಪ್ ಬಿನ್ನಡಿ, ಮಂಡಲ ರೈತ ಮೋರ್ಚಾ ಉಪಾಧ್ಯಕ್ಷರಾದ ನಾಗೇಶ್ ಗೌಡ ಅತ್ತಿಗೆರೆ, ಖಜಾಂಚಿ ಕವೀಶ್ ಬಗ್ಗಸಗೂಡು, ಮಹಾ ಶಕ್ತಿಕೇಂದ್ರದ ಕಾರ್ಯದರ್ಶಿ ಅರುಣ್ ಪೂಜಾರಿ, ಸದಸ್ಯ ಸಂದೀಪ್ ಹುಲ್ಲೇಮನೆ, ಯುವ ಮೋರ್ಚಾ ಅಧ್ಯಕ್ಷ ಅತೀತ್ ಪಟೇಲ್, ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳು, ಶಕ್ತಿಕೇಂದ್ರದ ಅಧ್ಯಕ್ಷರುಗಳು, ಬೂತ್ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪಾಲ್ಗೊಂಡಿದ್ದರು.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ