ಬಣಕಲ್ ವಿಧ್ಯಾ ಭಾರತಿ ಶಾಲೆಯ ದೈಹಿಕ ಶಿಕ್ಷಕರಾದ ಶೇಖರಪ್ಪ ರವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ಬಣಕಲ್::ಕರ್ನಾಟಕ ರಾಜ್ಯಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ 2025-26ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಬಣಕಲ್ ವಿಧ್ಯಾಭಾರತಿ ಶಾಲೆಯ ದೈಹಿಕ ಶಿಕ್ಷಕರಾದ ಶ್ರೀಯುತ ಶೇಖರಪ್ಪ ಎಚ್. ಎಸ್. ರವರಿಗೆ ನೀಡಿ ಗೌರವಿಸಲಾಯಿತು.
ನಮ್ಮ ವಿದ್ಯಾಬಾರತಿ ಶಾಲೆಯ ಹೆಮ್ಮೆಯ ದೈಹಿಕ ಶಿಕ್ಷಕರಾದ ಶೇಖರಪ್ಪ ರವರಿಗೆ ಸಂದಿರುವ ಗೌರವ ಅವರ ಶ್ರದ್ದೆ ನಿಸ್ವಾರ್ಥ ಸೇವಾ ಮನೋಭಾವಕ್ಕೆ ಸಂದ ಗೌರವವಾಗಿದೆ ಎಂದು ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಹರ್ಷ ವ್ಯಕ್ತಪಡಿಸಿದ್ದಾರೆ.
ವರದಿ ✍️ಸೂರಿ ಬಣಕಲ್