ಸ್ಥಳೀಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಕೋಮು ಸೌಹಾರ್ದತೆ ಕಾಪಾಡುವ ಮತ್ತು ಭದ್ರತೆ ದೃಷ್ಟಿಯಿಂದ ಬಣಕಲ್ ಪೊಲೀಸ್ ಠಾಣೆಯ ಪಿ ಎಸ್ ಐ ರೇಣುಕಾ ರವರ ನೇತೃತ್ವದಲ್ಲಿ ಬುಧವಾರ ಸಂಜೆ ಪಥ ಸಂಚಲನ ನಡೆಸಲಾಯಿತು.
ಬಣಕಲ್ ಪೊಲೀಸ್ ಠಾಣೆಯಿಂದ ಪ್ರಾರಂಭಗೊಂಡ ಪಥ ಸಂಚಲನ ಬಣಕಲ್ ಮುಖ್ಯರಸ್ತೆಯಿಂದ ಸಾಗಿ ಸಂತೆರಸ್ತೆ ಚರ್ಚ್ ರಸ್ತೆ ಮೂಲಕ ಸಾಗಿ ಠಾಣೆಯಲ್ಲಿ ಮುಕ್ತಾಯಗೊಳಿಸಲಾಯಿತು.
ಈ ಸಂದರ್ಭದಲ್ಲಿ ಬಣಕಲ್ ಠಾಣಾ ಪಿ ಎಸ್ ಐ ರೇಣುಕಾ ಹಾಗೂ ಪೊಲೀಸ್ ಸಿಬ್ಬಂದಿಗಳು ಇದ್ದರು.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ