ಸರ್ಕಾರದ ಗಣ ರಾಜ್ಯೋತ್ಸವ ಪ್ರಶಸ್ತಿ ತಾಲ್ಲೂಕು ಆಡಳಿತ ಮೂಡಿಗೆರೆ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣ ಸಮೀತಿಯವರು 26.01.2025ರ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಹೊಯ್ಸಳ ಕ್ರೀಡಾಂಗಣ ಮೂಡಿಗೆರೆ ಯಲ್ಲಿ ನಿಷ್ಠಾವಂತ – ಪ್ರಾಮಾಣಿಕ ಪತ್ರಕರ್ತ ನೆಂದು ತನು ಕೊಟ್ಟಿಗೆಹಾರ ಇವರನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲಾಯಿತು.
ಶಾಸಕಿ ನಯನ ಮೋಟಮ್ಮರವರು ತನು ರವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮೂಡಿಗೆರೆ ತಹಸೀಲ್ದಾರ್ ರಾಜಶೇಖರ ಮೂರ್ತಿ ಉಪಸ್ಥಿತರಿದ್ದರು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಪತ್ರಕರ್ತ ತನುಕೊಟ್ಟಿಗೆಹಾರ ಮಾತನಾಡುತ್ತಾ ಸುದೀರ್ಘಕಾಲದಿಂದ ಪತ್ರಿಕೆಯಲ್ಲಿ ನನ್ನ ಕರ್ತವ್ಯದ ಸೇವೆಯನ್ನು ಮಾಡಿದ್ದೇನೆ . ಪ್ರಶಸ್ತಿಗಾಗಿ ಯಾವುದೇ ರೀತಿಯ ಶಿಫಾರಸನ್ನು ಮಾಡಿಲ್ಲ ಮತ್ತು ಅರ್ಜಿಯನ್ನು ನೀಡಿಲ್ಲ ನನ್ನ ಪತ್ರಿಕಾ ಮಾಧ್ಯಮದ ಸೇವೆಯನ್ನು ಗುರುತಿಸಿ ಸನ್ಮಾನಿಸಿರುವುದು ಸಂತೋಷ ತಂದಿದೆ ಇದು ಜಿಲ್ಲೆಯ ಸ್ವಾರ್ಥರಹಿತ ನಿಷ್ಠಾವಂತ ಪತ್ರಕರ್ತರಿಗೆ ಸಂದ ಗೌರವಾಗಿದೆ. ಸಮಾಜ ನನ್ನನ್ನು ಗುರುತಿಸಿರುವುದು ಅಭಿಮಾನ ತಂದಿದೆ ಎಂದು ನುಡಿದರು.
ವರದಿ ✍️ಸೂರಿ ಬಣಕಲ್