ಆ್ಯಪ್‌ಗಳಲ್ಲಿ ಸಾಲ ತೆಗೆದುಕೊಳ್ಳುವ ಮುನ್ನ ಎಚ್ಚರ:ಬಣಕಲ್ ಠಾಣಾ ಪಿ. ಎಸ್. ಐ. ರೇಣುಕಾ

ಬಣಕಲ್ :ಇತ್ತೀಚಿನ ದಿನಗಳಲ್ಲಿ ಜನರು ಸಾಮಾಜಿಕ ಜಾಲತಾಣಗಳಲ್ಲಿ ಸುಲಭವಾಗಿ ಸಾಲ ಸಿಗುತ್ತದೆ ಎಂದು ಸಾಲ ಪಡೆದು ಮಾನಸಿಕ ಹಿಂಸೆ ಅನುಭವಿಸಿದವರನ್ನು ಜೀವ ಕಳೆದುಕೊಳ್ಳುತ್ತಿರುವವರನ್ನು ದಿನ ನಿತ್ಯ ಕೇಳುತ್ತಲೇ ನೋಡುತ್ತಲೇ ಬಂದಿದ್ದೇವೆ. ಆದರೆ ಇದರಿಂದ ಜನ ಇನ್ನೂ ಪಾಠ ಕಲಿತಂತೆ ಕಾಣುತ್ತಿಲ್ಲ.ಇತ್ತೀಚೆಗೆ ಬಣಕಲ್ ನಲ್ಲೆ ಕೆಲ ಯುವಕರು ಸಾಲ ಪಡೆದು ದುಪ್ಪಟ್ಟು ಹಣ ಕಟ್ಟಿದ ನಿದರ್ಶನ ನಮ್ಮ ಕಣ್ಣ ಮುಂದೆ ಇದೆ ಸುಲಭರೀತಿಯಲ್ಲಿ ಸಾಲ ದೊರೆಯುತ್ತದೆ ಎಂದು ಸಾಲ ಪಡೆದು ಪಡಬಾರದ ಕಷ್ಟ ಅನುಭವಿಸುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಬಣಕಲ್ ಠಾಣಾ ಪಿ.ಎಸ್ ಐ. ರೇಣುಕಾ ರವರು ಸಾರ್ವಜನಿಕರು ತುರ್ತು ಹಣದ ಸಾಲ ಪಡೆಯುವ ಸಂದರ್ಭದಲ್ಲಿ ಸಾಕಷ್ಟು ಜಾಗ್ರತೆ ಇರಲಿ.ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ತ್ವರಿತ ಸಾಲಗಳನ್ನು ನೀಡುವ ಕುರಿತಾಗಿ ಜಾಹೀರಾತುಗಳನ್ನು ಹಾಕಲಾಗುತ್ತಿದೆ. ಗೂಗಲ್ ಪ್ಲೇ ಸ್ಟೋರ್/ಆ್ಯಪಲ್ ಆ್ಯಪ್ ಸ್ಟೋರ್​​ಗಳಲ್ಲಿ ಸುಲಭವಾಗಿ ಸಿಗುವ ಮೊಬೈಲ್ ಅಪ್ಲಿಕೇಶನ್​ಗಳಲ್ಲಿ ಸಾಕಷ್ಟು ಲೋನ್‌ ಆ್ಯಪ್​ಗಳಿದ್ದು, ಅವುಗಳನ್ನು ಬಳಸುವ ಜನರು ಜಾಗರೂಕರಾಗಿರುವಂತೆ ಎಚ್ಚರಿಕೆ ನೀಡಿದ್ದಾರೆ. ಕ್ರಮೇಣ ಸಾಲ ಪಡೆದ ವ್ಯಕ್ತಿಯ ಭಾವಚಿತ್ರವನ್ನ ಮಾರ್ಪಿಂಗ್​ ಮಾಡಿ ಅಶ್ಲೀಲ ಚಿತ್ರಗಳಾಗಿ ಮಾರ್ಪಡಿಸಿ ಕುಟುಂಬ ಹಾಗೂ ಸ್ನೇಹಿತರಿಗೆ ಕಳುಹಿಸುವುದಾಗಿ ಬೆದರಿಸಿ ಕಿರುಕುಳ ನೀಡುತ್ತಿರುವುದು ಹೆಚ್ಚಾಗಿದೆ. ಹೀಗಾಗಿ ಸಾರ್ವಜನಿಕರು ಅಧಿಕೃತವಾಗಿ ನಡೆಸುವ ಹಣಕಾಸು ಸಂಸ್ಥೆಗಳಿಂದಲೇ ಸಾಲ ತೆಗೆದುಕೊಳ್ಳುವುದರ ಬಗ್ಗೆ ಗಮನಹರಿಸಬೇಕು. ಅಲ್ಲದೆ, ಮಾರ್ಪಿಂಗ್ ಮಾಡಿದ ಚಿತ್ರವನ್ನ ಹಿಡಿದು ಬೆದರಿಕೆ ತಂತ್ರ ಹೂಡಿದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಎಂದು ಬಣಕಲ್ ಠಾಣಾ ಪಿ. ಎಸ್.ಐ. ರೇಣುಕಾ ರವರು ಹೇಳಿದರು

ವರದಿ ✍️ಸೂರಿ ಬಣಕಲ್

Sahifa Theme License is not validated, Go to the theme options page to validate the license, You need a single license for each domain name.