ಬಣಕಲ್ : ಕೊಟ್ಟಿಗೆಹಾರದ ರಾಮ್ ಪ್ರಸಾದ್ ಪ್ರಾವಿಜನ್ ಸ್ಟೋರ್ ಮಾಲೀಕ ವಿಕ್ರಂ ಬಿದಿರುತಳ ಅವರು ತುರ್ತು ಕಾರ್ಯಕ್ಕೆ ಬಣಕಲ್ ಗೆ ಹೋಗಿದ್ದರು.ಮೊಬೈಲ್ ತೆಗೆಯುವ ಅವಸರದಲ್ಲಿ ರೂ10ಸಾವಿರವನ್ನು ಬಣಕಲ್ ನಲ್ಲಿ ಕಳೆದುಕೊಂಡು ಬಂದಿದ್ದರು.ಹಣ ಕಳೆದುಕೊಂಡು ವಿಕ್ರಂ ಚಡಪಡಿಸುತ್ತಿದ್ದಾಗ, ಹಣ ಸಿಕ್ಕಿದ ಬಣಕಲ್ ಆಟೋ ಚಾಲಕ ತನ್ಜೀಲ್ ಅವರು ಬಂದು ಹಣ ಬೀಳಿಸಿಕೊಂಡು ಬಂದ ವಿಕ್ರಂ ಅವರಿಗೆ ಹಣ ಮರಳಿಸಿ ಮಾನವೀಯತೆ ಮೆರೆದರು.ಅಂಗಡಿಯ ಮಾಲೀಕ ತನ್ಜೀಲ್ ಅವರಿಗೆ ಹಣ ಮರಳಿಸಿದ್ದಕ್ಕೆ ದಾನಿಗಳಾದ ದಿನೇಶ್ ಶೆಟ್ಟಿ, ಅಜೀಜ್,ಇನ್ನಿತರರು ಅಭಿನಂದನೆ ಸಲ್ಲಿಸಿದರು.
