ಕೊಟ್ಟಿಗೆಹಾರದ ಆಯಿಷಾ ನಮ್ರ ವೈದ್ಯಕೀಯ ಪರೀಕ್ಷೆಯಲ್ಲಿ ಪ್ರಥಮ

ಬಣಕಲ್ : ಕೊಟ್ಟಿಗೆಹಾರದ ನಿವಾಸಿ ಪ್ರಸನ್ನ ಕಾಲೇಜಿನ ವಿದ್ಯಾರ್ಥಿನಿ ಆಯಿಷಾ ನಮ್ರ ವೈದ್ಯಕೀಯ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ಕಾಫಿನಾಡಿಗೆ ಹೆಸರು ತಂದಿದ್ದಾರೆ.

ಆಯಿಷಾ ನಮ್ರ ಕೊಟ್ಟಿಗೆಹಾರದ ಅಸ್ಘರ್ ಹುಸೇನ್ (ಮುನೀರ್) ಹಾಗೂ ರುಕ್ಸಾನ ದಂಪತಿಯ ಪುತ್ರಿ.ಪ್ರಾಥಮಿಕ ಶಿಕ್ಷಣವನ್ನು ಬಣಕಲ್ ರಿವರ್ ವ್ಯೂವ್ ಶಾಲೆಯಲ್ಲಿ ಮುಗಿಸಿ ಪ್ರೌಢಶಾಲಾ ಶಿಕ್ಷಣವನ್ನು ಬಣಕಲ್ ಪ್ರೌಢಶಾಲೆಯಲ್ಲಿ ಕಲಿತು, ಪಿಯುಸಿ ಶಿಕ್ಷಣವನ್ನು ಮೂಡಿಗೆರೆಯ ಹರೀಶ್ ಪಿಯು ಕಾಲೇಜಿನಲ್ಲಿ ಮುಗಿಸಿದರು. ಬಳಿಕ ವೈದ್ಯಕೀಯ ಶಿಕ್ಷಣ ಪಡೆಯಲು ಬೆಳ್ತಂಗಡಿಯ ಪ್ರಸನ್ನ ಕಾಲೇಜಿಗೆ ಪ್ರವೇಶ ಪಡೆದು ನಾಲ್ಕೂವರೆ ವರ್ಷ ಬಿಎಎಂಎಸ್ ವೈದ್ಯಕೀಯ ಕೋರ್ಸ್ ಮುಗಿಸಿದರು. ಕಾಫಿನಾಡಿನ ಈ ವೈದ್ಯೆ ವಿದ್ಯಾರ್ಥಿನಿಯ ಸಾಧನೆಗೆ ಪೋಷಕರು, ಗ್ರಾಮಸ್ಥರು ಹರ್ಷ ವ್ಯಕ್ತ ಪಡಿಸಿದ್ದಾರೆ.