ವಲಯ ಮಟ್ಟದ ಕ್ರೀಡಾಕೂಟ : ಪುರುಷರ ವೈಯಕ್ತಿಕ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಬಣಕಲ್ ಉರ್ದು ಶಾಲೆಯ ಶೇಕ್ ಮುಸ್ಕೂರ್

ಬಣಕಲ್ : ದಿನಾಂಕ 23/8/2024 ರಂದು ರಿವರ್ ವ್ಯೂ ಶಾಲಾ ವತಿಯಿಂದ ನಡೆದ ಬಾಳೂರು ಮತ್ತು ಬಣಕಲ್ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಉರ್ದು ಶಾಲೆ ಬಣಕಲ್ ನ ವಿದ್ಯಾರ್ಥಿ ಶೇಕ್ ಮುಸ್ಕೂರ್ ಗುಂಡು ಎಸೆತ ಪ್ರಥಮ, ಉದ್ದ ಜಿಗಿತ ದ್ವಿತೀಯ, 100 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆಯೋ ಮೂಲಕ ಪುರುಷರ ವೈಯಕ್ತಿಕ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾನೆ.

ವಿದ್ಯಾರ್ಥಿಯ ಈ ಸಾಧನೆಗೆ ಶಾಲೆ ಶಿಕ್ಷಕರು, ಆಡಳಿತ ಮಂಡಳಿ ಮತ್ತು ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ