ಬಣಕಲ್ ಮತ್ತು ಬಾಳೂರು ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ 2024 – 25 ರಿವರ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯ ಆತಿಥ್ಯದಲ್ಲಿ ನಿಯೋಜಿಸಿದ ಕ್ರೀಡಾಕೂಟದಲ್ಲಿ, ಸಾಯಿ ಕೃಷ್ಣ ಆಸ್ಪತ್ರೆ ಬಣಕಲ್ ವತಿಯಿಂದ, ಆಟದ ಮಧ್ಯೆ ನಡೆಯುವ ಸಣ್ಣಪುಟ್ಟ ಗಾಯಗಳಿಗೆ ಪ್ರಥಮ ಚಿಕಿತ್ಸೆ ಹಾಗೂ ವೈದ್ಯಕೀಯ ಸೇವೆಯನ್ನು ಕೊಡುವುದರ ಮುಖಾಂತರ ಕ್ರೀಡೆಗೆ ಸಹಕಾರ ನೀಡಿದ್ದರು.ಸುಮಾರು 20ಕ್ಕೂ ಹೆಚ್ಚಿನ ಕ್ರೀಡಾಪಟುಗಳಿಗೆ ಪ್ರಥಮ ಚಿಕಿತ್ಸೆಯನ್ನು ನೀಡಿ ಸಹಕರಿಸಲಾಗಿತ್ತು. ಇದರ ಪ್ರಯುಕ್ತ ಬಣಕಲ್ ರಿವರ್ ವ್ಯೂ ಶಾಲಾ ವತಿಯಿಂದ ಸಹಕಾರ ನೀಡಿದ ಸಾಯಿಕೃಷ್ಣ ಆಸ್ಪತ್ರೆ ಬಣಕಲ್ ಸಿಬ್ಬಂದಿ ವರ್ಗಕ್ಕೆ ವಂದಿಸಲಾಯಿತು.
