Screenshot

ಬಣಕಲ್ ಪ್ರೌಢಶಾಲೆಯಲ್ಲಿ ವಿಮುಕ್ತಿ ಸಂಸ್ಥೆ ವತಿಯಿಂದ ಅಗ್ನಿ ಸುರಕ್ಷತಾ ಅರಿವು ಕಾರ್ಯಕ್ರಮ


ಬಣಕಲ್: ವಿಮುಕ್ತಿ ಸಂಸ್ಥೆ ಬಣಕಲ್ ವತಿಯಿಂದ ಮೂಡಿಗೆರೆ ಅಗ್ನಿಶಾಮಕ ದಳದ ಸಹಯೋಗದಲ್ಲಿ ನವೆಂಬರ್ 26ರಂದು ಬಣಕಲ್ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅಗ್ನಿ ಅವಘಡಗಳ ಮುನ್ನೆಚ್ಚರಿಕೆ ಮತ್ತು ಸುರಕ್ಷತಾ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.


ಅಗ್ನಿಶಾಮಕ ದಳದ ಮಧು HP ಅವರು ಅಗ್ನಿ ಅವಘಡಗಳ ಸಂದರ್ಭದಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳು, ನೈಸರ್ಗಿಕ ವಿಕೋಪಗಳ ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ವಿಧಾನಗಳ ಕುರಿತು ಮಾಹಿತಿ ನೀಡಿದರು. ಅಗ್ನಿಶಾಮಕ ವಾಹನ ಮತ್ತು ಉಪಕರಣಗಳ ಕಾರ್ಯವೈಖರಿಯನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿ, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಪ್ರಭಾರ ಮುಖ್ಯ ಶಿಕ್ಷಕಿ ವಲ್ಸಮ್ಮ ಪಾವ್ಲ್, ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಜಾಗೃತಿ ಮೂಡಿಸಿ ತುರ್ತು ಸಂದರ್ಭಗಳನ್ನು ಧೈರ್ಯದಿಂದ ಎದುರಿಸಲು ಸಹಕಾರಿಯಾಗುತ್ತವೆ ಎಂದರು.


ಸಹಾಯಕ ಅಗ್ನಿಶಾಮಕ ಅಧಿಕಾರಿ ಮಲ್ಲೇಶ್ ಸಿ.ಜಿ., ಚಾಲಕ ರಮೇಶ್ ದೊಡ್ಡಮನಿ, ಸಿಬ್ಬಂದಿಗಳಾದ ಸುನಿಲ್, ಸಚಿನ್ ಎಂ., ಶಿಕ್ಷಕರಾದ ಉಮಾ ಮಹೇಶ್, ಸಿ. ಬೋರಕ್ಕ ಹಾಗೂ ಇತರ ಶಿಕ್ಷಕರು ಉಪಸ್ಥಿತರಿದ್ದರು. ವಿಮುಕ್ತಿ ಸಂಸ್ಥೆಯ ಸಿಬ್ಬಂದಿ ವಿಂದ್ಯಾ ಪ್ರಾಸ್ತಾವಿಕವಾಗಿ ಮಾತನಾಡಿದರು.


ವರದಿ ✍️ಸೂರಿ ಬಣಕಲ್