ಬಣಕಲ್ :ಇದೊಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈ ಒಂದು ಶಾಲೆಯಲ್ಲಿ ಒಟ್ಟು ಏಳು ತರಗತಿಗಳು ಇದ್ದು ಇಬ್ಬರೇ ಇಬ್ಬರು ಶಿಕ್ಷಕರಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲೂಕಿನ ಬಗ್ಗಸಗೋಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಬ್ಬರೇ ಶಿಕ್ಷಕರಿದ್ದು 7 ತರಗತಿ ಮಕ್ಕಳಿಗೆ ಇಬ್ಬರೇ ಪಾಠ ಮಾಡುತ್ತಿದ್ದಾರೆ, ಶಾಲೆಯಲ್ಲಿ ಒಟ್ಟು 75 ಮಕ್ಕಳಿದ್ದಾರೆ, ಈಗಾಗಲೇ ಈ ಒಂದು ಸಮಸ್ಯೆ ಕುರಿತು ಶಾಲೆಗೆ ಶಿಕ್ಷಕರನ್ನು ನೇಮಿಸುವಂತೆ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ ಹೀಗಾಗಿ ಬಗ್ಗಸಗೋಡು ಶಾಲಾ ವಿದ್ಯಾರ್ಥಿಗಳು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಇದರಿಂದ ಬೆಸೆತ್ತ ಪೋಷಕರುಹಾಗೂ ವಿದ್ಯಾರ್ಥಿಗಳು ಶಾಲೆಗೆ ಆದಷ್ಟು ಬೇಗ ಶಿಕ್ಷಕರನ್ನು ನೇಮಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು
ವರದಿ:✍️ಸೂರಿ ಬಣಕಲ್