ಬಣಕಲ್ ಫ್ರೆಂಡ್ಸ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ಉತ್ತಮ್ ಗೌಡ ಆಯ್ಕೆ

ಬಣಕಲ್ ರಿವರ್ ವ್ಯೂ ಶಾಲೆಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಬಣಕಲ್ ಫ್ರೆಂಡ್ಸ್ ಕ್ಲಬ್ ನ ನೂತನ ಅಧ್ಯಕ್ಷರು ಹಾಗೂ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಫ್ರೆಂಡ್ಸ್ ಕ್ಲಬ್ ಆಯೋಜಿಸಿದ್ದ ಸಭೆಯಲ್ಲಿ ಫ್ರೆಂಡ್ಸ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ಗೌರವ ಅಧ್ಯಕ್ಷ ಪ್ರವೀಣ್ ಗೌಡರ ಸಮ್ಮುಖದಲ್ಲಿ ಉತ್ತಮ್ ಗೌಡ ಅವರನ್ನು ಆಯ್ಕೆ ಮಾಡಲಾಯಿತು ಹಲವಾರು ವರ್ಷಗಳಿಂದ ಕ್ಲಬ್ ನಲ್ಲಿ ಕೆಲಸ ಮಾಡಿದ ಅನುಭವವಿರುವ ಉತ್ತಮ್ ಅವರು ಕ್ಲಬ್ ನ ಯಶಸ್ಸಿನಲ್ಲಿ ಅವರು ನೀಡಿದ ಕೊಡುಗೆ ಅಪಾರ ಕ್ಲಬ್ ನಿಂದ ಕೈಗೊಳ್ಳಲಾದ ಅನೇಕ ಸಾಮಾಜಿಕ ಕಳಕಳಿಯ ಕೆಲಸಗಳಲ್ಲಿ ಮುಂಚೂಣಿಯಲ್ಲಿ ನಿಂತು ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾ ಬಂದಿದ್ದಾರೆ ಹಾಗೂ ಕ್ಲಬ್ ನ ಎಲ್ಲಾ ಸದಸ್ಯರನ್ನು ಒಂದು ಗೂಡಿಸಿ ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುತ್ತಾ ಕ್ಲಬ್ ಅನ್ನು ಯಶಸ್ಸಿನೆಡೆ ಮುನ್ನಡೆಸಲು ಕಾರಣಿಕರ್ತರಾದ ಶುದ್ಧ ವ್ಯಕ್ತಿತ್ವದ ಉತ್ತಮ್ ಅವರನ್ನು ಸರ್ವ ಸದಸ್ಯರ ಸಮ್ಮುಖದಲ್ಲಿ ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು ಹಾಗೆ ನೂತನ ಪದಾಧಿಕಾರಿಗಳ ಆಯ್ಕೆ ಕೂಡ ಮಾಡಲಾಯಿತು

ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಕ್ಲಬ್ ನ ಸದಸ್ಯರು ಭಾಗಿಯಾಗಿದ್ದರು

*ನೂತನ ಪದಾಧಿಕಾರಿಗಳು* ಕಾರ್ಯದರ್ಶಿಗಳಾಗಿಹಾರುಣ್ ಪೈಂಟರ್, ಖಜಾಂಚಿಯಾಗಿಹಸೈನಾರ್ ಸಹ ಕಾರ್ಯದರ್ಶಿಯಾಗಿ ಅರುಣ್ ರೋಡ್ರಿಗಸ್ ಅವರನ್ನು ನೇಮಕ ಮಾಡಲಾಯಿತು.

ವರದಿ ✍️ಸೂರಿ ಬಣಕಲ್