ಬಣಕಲ್ ಗ್ರಾಮ ಪಂಚಾಯಿತಿಯಲ್ಲಿ 2024-25ನೇ ಸಾಲಿನ ಮೊದಲನೇ ಸುತ್ತಿನ ವಾರ್ಡ್ ಸಭೆ ಮತ್ತು ಗ್ರಾಮ ಸಭೆ

ಬಣಕಲ್: ಇಂದು ಗ್ರಾಮ ಪಂಚಾಯಿತಿಯ ವಾರ್ಡ್ ಸಭೆಯನ್ನು ಆಯಾ ವಾರ್ಡಿನ ಸದಸ್ಯರ ಅಧ್ಯಕ್ಷತೆಯಲ್ಲಿ ಹಾಗೂ ಗ್ರಾಮ ಸಭೆಯನ್ನು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ಅತಿಕಾ ಬಾನು ರವರ ಅದ್ಯಕ್ಷತೆಯಲ್ಲಿ ಹಾಗೂ ಬಣಕಲ್ ಗ್ರಾಮ ಪಂಚಾಯಿತಿ ನೂಡಲ್ ಅಧಿಕಾರಿಗಳಾದ ಸೋಮಶೇಖರಪ್ಪ,ಸಹಾಯಕ ನಿರ್ದೇಶಕರು, ಗ್ರೇಡ್- 2 ಸಮಾಜ ಕಲ್ಯಾಣ ಇಲಾಖೆ, ಮೂಡಿಗೆರೆ ಇವರ ಉಸ್ತುವಾರಿಯಲ್ಲಿ ನಡೆಯಿತು.

ಈ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಲವು ಮಾಹಿತಿಗಳನ್ನು ನೀಡಿದರು. ಗ್ರಾಮದ ಅಭಿವೃದ್ಧಿಯ ದೃಷ್ಟಿಯಿಂದ ಗ್ರಾಮಸ್ಥರು ಹಲವು ಸಲಹೆ ಸೂಚನೆಗಳನ್ನು ನೀಡಿದರು. ಮಾಜಿ ಉಪಾಧ್ಯಕ್ಷ ಶ್ರೀಯುತ ಇರ್ಫಾನ್ ಅವರು ಮಾತಾಡಿ ಗ್ರಾಮದ ಅಭಿವೃದ್ಧಿ ಗೆ ಸಾರ್ವಜನಿಕರ ಸಹಕಾರ ಅತ್ಯಮೂಲ್ಯ ವಾಗಿದೆ ಸಾರ್ವಜನಿಕರೊಂದಿಗೆ ಬೆರೆತು ಗ್ರಾಮದ ಅಭಿವೃದ್ಧಿ ಗೆ ಶ್ರಮಿಸುತ್ತೇವೆ ಎಂದು ತಿಳಿಸಿದರು.

ಈ ಕಾರ್ಯಕ್ರಮ ದಲ್ಲಿ ಅಧ್ಯಕ್ಷರು ಅತಿಕಾ ಬಾನು,ಉಪಾಧ್ಯಕ್ಷರು ಸಿರಾಜುದ್ದಿನ್ ಹಾಗೂ ಸರ್ವ ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ. ಎನ್ ಕೃಷ್ಣಪ್ಪ.ಹಾಗೂ ಇಲಾಖಾ ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ವರದಿ :✍️ಸೂರಿ ಬಣಕಲ್