ಬಣಕಲ್: ಬಣಕಲ್ ನಲ್ಲಿ ಸಾರ್ವಜನಿಕ ಶೌಚಾಲಯ ಮತ್ತು ಮೂತ್ರಾಲಯಗಳ ಕೊರತೆ ತೀವ್ರವಾಗಿ ಕಾಡುತ್ತಿದೆ. ನಗರಕ್ಕೆ ವಿವಿಧ ಉದ್ದೇಶಗಳಿಗೆ ಬರುವ ಜನರು, ಮೂತ್ರ ವಿಸರ್ಜನೆಗೆ ಖಾಲಿ ನಿವೇಶನ, ಪಾಳುಬಿದ್ದ ಕಟ್ಟಡಗಳತ್ತ ಹೋಗುವ ದುಃಸ್ಥಿತಿ ಇದೆ. ಇಲ್ಲಿ ಇರುವ ಸಾರ್ವಜನಿಕ ಶೌಚಾಲಯ ಮತ್ತು ಮೂತ್ರಾಲಯಗಳ ಸ್ಥಿತಿ ಚಿಂತಾಜನಕವಾಗಿದೆ.
ನೈರ್ಮಲ್ಯದ ಕೊರತೆ, ಸುತ್ತಮುತ್ತಲು ಸ್ವಚ್ಛತೆ ಇಲ್ಲದ .. ಕಾರಣಗಳಿಂದ ಜನರು ಸಾರ್ವಜನಿಕ ಶೌಚಾಲಯಗಳ ಬಳಕೆಗೆ ಹಿಂದೇಟು ಹಾಕುತ್ತಾರೆ.
ಡೆಂಗ್ಯೂ ಜ್ವರದ ಭೀತಿಯಲ್ಲಿರುವ ಸಾರ್ವಜನಿಕರಿಗೆ ಶೌಚಾಲಯದ ಸುತ್ತ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ದಯವಿಟ್ಟು ಇದರ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಿಬೇಕು ಎಂಬುದು ಗ್ರಾಮಸ್ಥರ ಅಗ್ರಹ