ಹಾಡಹಗಲೇ ಮನೆಗೆ ನುಗ್ಗಿ ಕಳ್ಳತನ :ಬಣಕಲ್ ಪಿ.ಎಸ್.ಐ ಕೌಶಿಕ್ ನೇತೃತ್ವದಲ್ಲಿ ಕಳ್ಳತನ ಆರೋಪಿ ಬಂಧನ

ಬಣಕಲ್ : ಬಣಕಲ್ ಹೋಬಳಿ ಬೆಟಗೆರೆ-ಜಾರ್ಗಲ್ ಗ್ರಾಮದ ವಾರಿಜ ಎಂಬುವವರ ಒಂಟಿ ಮನೆಯಿಂದ ಚಿನ್ನ ಹಾಗೂ ಹಣವನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಬಣಕಲ್ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮೂಡಿಗೆರೆ ತಾಲ್ಲೂಕು ಹಳೇಕೋಟೆ ಗ್ರಾಮದ ಲೋಕೇಶ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

12/6/2024ರಂದು ಬೆಟ್ಟಿಗೆರೆ-ಜಾರ್ಗಲ್ ನ ವಾರಿಜ ಎಂಬುವವರ ಒಂಟಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೀರುವಿನಲ್ಲಿದ್ದ 21.650ಗ್ರಾಂ ತೂಕದ ಚಿನ್ನದ ನೆಕ್ಲೆಸ್. 6ಗ್ರಾಂ ತೂಕದ ಚಿನ್ನದ ಓಲೆ ಹಾಗೂ 1500 ಹಣ ಕಳ್ಳತನ ನಡೆದಿದ್ದ ಬಗ್ಗೆ ಬಣಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮೂಡಿಗೆರೆ ಪೊಲೀಸ್ ವೃತ್ತ ನಿರೀಕ್ಷಕ ಸೋಮೇಗೌಡ ಪಿ.ಪಿ.ರವರ ಮಾರ್ಗದರ್ಶನದಲ್ಲಿ ಬಣಕಲ್ ಪಿ.ಎಸ್.ಐ. ಕೌಶಿಕ್ ನೇತೃತ್ವದಲ್ಲಿ ಕಾರ್ಯಾಚರಣೆಗಿಳಿದ ಪೊಲೀಸರು ಕಳ್ಳತನ ಆದ 6ದಿನದಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ ಚಿನ್ನ ಮತ್ತು ಹಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಗುರುರಾಜ್.ಗಿರೀಶ್ ಬಿ.ಸಿ. ಮೆಹಬೂಬ್. ಜಗದೀಶ್ ಹಾಗೂ ಪ್ರದೀಪ್ ರವರು ಪಾಲ್ಗೊಂಡಿದ್ದರು.

ವರದಿ ✍️ಸೂರಿ ಬಣಕಲ್