ಬಣಕಲ್ :ಮುಸ್ಲಿಂ ಬಾಂಧವರಿಂದ ಸಂಭ್ರಮದ ಬಕ್ರಿದ್ ಆಚರಣೆ

ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಬಣಕಲ್ ನಲ್ಲಿ ಸೋಮವಾರ ಶ್ರದ್ದಾ ಭಕ್ತಿಯಿಂದ ಮುಸ್ಲಿಂ ಬಾಂದವರು ಆಚರಿಸಿದರು. ಬೆಳಗ್ಗೆ ವಿವಿಧ ಮಸೀದಿಗಳಲ್ಲಿ ವಿಶೇಷ ಈದ್ ನಮಾಜ್ ನೆರವೇರಿಸಲಾಯಿತು.

ಮುಸಲ್ಮಾನ ಬಾಂದವರು ಬೆಳಗ್ಗೆ ಹೊಸ ಬಟ್ಟೆಗಳನ್ನು ಧರಿಸಿ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಕೈ ಕುಲುಕಿ ಪರಸ್ಪರ ಅಲಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.

ವರದಿ ✍️ಸೂರಿ ಬಣಕಲ್