ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಶುಕ್ರವಾರ ಬಣಕಲ್ ನ ವಿವಿಧ ಶಾಲೆಗಳಲ್ಲಿ ಯೋಗದ ಕುರಿತಾದ ಮಾಹಿತಿ ಮತ್ತು ಯೋಗಭ್ಯಾಸ ಕಾರ್ಯಕ್ರಮ ಜರುಗಿತು.
ಬಣಕಲ್ ಪ್ರೌಢಶಾಲೆ. ವಿದ್ಯಾಭಾರತಿ. ರಿವರ್ ವ್ಯೂ ಶಾಲೆ ಹಾಗೂ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಯೋಗದ ವಿವಿಧ ಆಸನಗಳನ್ನು ಮಾಡುವ ಮೂಲಕ ಗಮನ ಸೆಳೆದರು. ಶಾಲಾ ಶಿಕ್ಷಕರು, ಗ್ರಾಮ ಪಂಚಾಯಿತಿ ಸದಸ್ಯರು, ಪಂಚಾಯಿತಿ ಅಧ್ಯಕ್ಷರು ಅಧಿಕಾರಿಗಳು, ಹಾಗೂ ಕಪುಚಿನ್ ಸಹಕಾರ ಸಂಘದ ಸದಸ್ಯರುಗಳು ಯೋಗ ಮಾಡುವ ಮೂಲಕ ಮಕ್ಕಳಿಗೆ ಸಾಥ್ ನೀಡಿದರು. ಹಾಗೆ ಯೋಗದ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು.
ವರದಿ ✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ