ಎ.ಜೆ.ಆಸ್ಪತ್ರೆ ಮತ್ತುಸಂಶೋಧನ ಕೇಂದ್ರ ಮಂಗಳೂರು,ಮತ್ತು ಮಲ್ನಾಡ್ ಕ್ಲಿನಿಕ್ ಮತ್ತು ಲ್ಯಾಬೋರೆಟರಿ ಬಣಕಲ್ ಇವರ ಸಹಯೋಗದಲ್ಲಿ ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಮಂಗಳೂರಿನ ಆಸ್ಪತ್ರೆಯ ನುರಿತ ವೈದರುಗಳಿಂದ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು. ವೈದರು ಗಳಾದ ಡಾ ಕೃತಿ. ಡಾ ಪೂರ್ಣ. ಡಾ ಹರ್ಷಿತ್. ಡಾ ಇಮ್ರಾನ್ ಜನರ ಅರೋಗ್ಯ ತಪಾಸಣೆ ಮಾಡಿದರು. ರಿವರ್ ವ್ಯೂ ಶಾಲಾ ಆವರಣದಲ್ಲಿ ನೂರಕ್ಕೂ ಅಧಿಕ ಜನರು ಆಗಮಿಸಿ ತಜ್ಞರಲ್ಲಿ ತಪಾಸಣೆ ಮಾಡಿಸಿದರು. ರಕ್ತದ ಒತ್ತಡ ಮಧುಮೇಹ ಪರೀಕ್ಷೆ. ಮೂತ್ರ ಕೋಶ ತಪಾಸಣೆ. ಹೃದ್ರೋಗ ತಪಾಸಣೆ. ಇನ್ನಿತರ ಪರೀಕ್ಷೆಗಳನ್ನು ಮಾಡಿಸಿ ಕೊಂಡರು.ನೂರಾರು ಜನರು ಮಕ್ಕಳು ಸಹ ಶಿಬಿರದ ಲಾಭ ಪಡೆದರು.ಬೆಳಗ್ಗೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಅತಿಥಿಗಳಾಗಿ ಯಶೋಧರ್ ಭಟ್. ಗೌಸ್ ಮೊಯಿದಿನ್, ಅರುಣ್ ಪೂಜಾರಿ, ಇರ್ಫಾನ್, ಪ್ರಭಾಕರ್ ಭಿನ್ನಡಿ, ಇಮ್ರಾನ್, ಪಿ. ವಾಸುದೇವ್ ಗ್ರಾಮಪಂಚಾಯಿತಿ ಅಧ್ಯಕ್ಷೆ ಆತಿಕ ಬಾನು ಮತ್ತು ಆಸ್ಪತ್ರೆಯ ಅಧಿಕಾರಿಗಳು ಉಪಸ್ಥಿತಿತರಿದ್ದರು. ಈ ಸಂದರ್ಭದಲ್ಲಿ ಸಮಾಜ ಸೇವಕ ಆರಿಫ್ ಅವರನ್ನು ಸನ್ಮಾನಿಸಲಾಯಿತು.
ವರದಿ ✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ