ಬಣಕಲ್: ಕಳೆದ ಸುಮಾರು 20 ರಿಂದ 25 ವರ್ಷಗಳಿಂದ ಬಣಕಲ್ ನ ಕೆಲವು ರಸ್ತೆಗಳು ಡಾಂಬರೀಕರಣವಾಗದೆ ಹೋಂಡಾ ಗುಂಡಿ ಬಿದ್ದ ಹಿನ್ನೆಲೆಯಲ್ಲಿ ಬಣಕಲ್ ನ ಸಾರ್ವಜನಿಕರು ವಿಶಿಷ್ಟ ರೀತಿಯಾಗಿ ಪ್ರತಿಭಟಿಸುವ ತೀರ್ಮಾನ ಕೈಕೊಂಡಿದ್ದಾರೆ.
ಈ ಒಂದು ಪ್ರತಿಭಟನೆಯ ರೂಪರೇಷೆ ಹೀಗಿದೆ, ಸತತ 20 ವರ್ಷಗಳ ರಾಜಕೀಯ ನಾಯಕರ ಪರಿಶ್ರಮದಿಂದ ಬಣಕಲ್ ಗ್ರಾಮ ಪಂಚಾಯಿತಿಯಿಂದ ಅಂಬೇಡ್ಕರ್ ಭವನದ ವರಗಿನ ರಸ್ತೆ, ಮತ್ತು ಸುಭಾಷ್ ನಗರ ಗಣಪತಿ ಪೆಂಡಲ್ ನಿಂದ ಸೊಸೈಟಿವರೆಗಿನ ರಸ್ತೆಯು ಯು 12,000 ಕೋಟಿ ರೂಗಳಲ್ಲಿ ನವೀಕರಣಗೊಂಡಿದ್ದು ಇದರ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 1.3.2024ರಂದು ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ರಸ್ತೆಯ ಅಭಿವೃದ್ಧಿಗೆ ಶ್ರಮಿಸಿದ 20 ವರ್ಷದಿಂದ ರಾಜಕೀಯ ಮಾಡಿದ ಮಾಜಿ ಹಾಗೂ ಹಾಲಿ mla, mp, ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಅಧ್ಯಕ್ಷರನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ಮಾಡುವ ಮೂಲಕ ಬಣಕಲ್ನ ಸರ್ವ ಸದಸ್ಯರ ಪರವಾಗಿ ಸನ್ಮಾನ ಮಾಡಲಾಗುತ್ತದೆ.
ಈ ಒಂದು ರಸ್ತೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಪಾನೀಯ ತೋರಣ ಮತ್ತು ಹೂವಿನ ಅಲಂಕಾರದ ಜವಾಬ್ದಾರಿಯನ್ನು ಸನ್ಶೈನ್ ಫ್ರೆಂಡ್ಸ್ ಬಣಕಲ್ ವಹಿಸಿಕೊಂಡರೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಫ್ರೇಂಡ್ಸ್ ಕ್ಲಬ್ ಬಣಕಲ್, ಡಿಜೆ ಮತ್ತು ದೀಪಾಲಂಕಾರವನ್ನು ವಾಹನ ಚಾಲಕರ ಸಂಘ, ಬಂದಂತಹ ಅತಿಥಿಗಳಿಗೆ ಸತ್ಕಾರವನ್ನು ಮಹಿಳಾ ಸ್ವಸಹಾಯ ಸಂಘ, ಮನೋರಂಜನ ವ್ಯವಸ್ಥೆಯನ್ನು ಬಣಕಲ್ನ ಎಲ್ಲಾ ಶಾಲಾ ವಿದ್ಯಾರ್ಥಿಗಳು ವಹಿಸಿಕೊಂಡಿರುತ್ತಾರೆ, ಈ ಕಾರ್ಯಕ್ರಮವು ಸತತ ಏಳು ದಿನಗಳ ಕಾಲ ನಡೆಯಲಿದ್ದು ಪ್ರತಿದಿನ ಮಧ್ಯಾಹ್ನ ರಾಜಕೀಯ ನಾಯಕರಿಗೆ ಮಾತ್ರ ಊಟದ ವ್ಯವಸ್ಥೆ ಇರುತ್ತದೆ.
ಈ ರಸ್ತೆಯ ವೈಶಿಷ್ಟಗಳು
1.ಯಾವುದೇ ರೀತಿಯ ಬೆನ್ನು ನೋವು ಕೈಕಾಲು ನೋವು ಒಂದು ಬಾರಿ ನಡೆದರೆ ಮಾಯವಾಗುತ್ತದೆ
2. ವಾಹನಗಳ ಬಿಡಿ ಭಾಗಗಳ ಪರಿಚಯವಾಗುತ್ತದೆ ಹಾಗೂ ಗ್ಯಾರೇಜ್ ಮಾಲೀಕರಿಗೆ ಹೆಚ್ಚಿನ ಆದಾಯ ತರುತ್ತದೆ
3. ಮಳೆಗಾಲದಲ್ಲಿ ಶಾಲಾ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಸಮವಸ್ತ್ರದಲ್ಲಿ ವಿಭಿನ್ನ ರೀತಿಯ ಗ್ರಾಫಿಕ್ಸ್ ಗಳು ತನ್ನಷ್ಟಕ್ಕೆ ಉದ್ಭವವಾಗುತ್ತದೆ3. ಕೆಮ್ಮು ಶೀತ ಅಲರ್ಜಿ ಇಷ್ಟರವರೆಗೆ ಆಗದವರಿಗೆ ಒಂದೇ ದಿನದಲ್ಲಿ ಆಗುತ್ತದೆ
4. ಮದ್ಯಪಾನ ಮಾಡದೇನೇ ತೇಲಾಡಿಕೊಂಡು ಹೋಗಬಹುದು ಈ ಒಂದು ಅದ್ಭುತವಾದ ರಸ್ತೆಯ ಉದ್ಘಾಟನೆಯಲ್ಲಿ ಬಣಕಲ್ನ ಸರ್ವ ಸದಸ್ಯರು ಭಾಗವಹಿಸಿ, ಒಂದು ಕಾರ್ಯಕ್ರಮವನ್ನು ನೀವು ಒಂದು ಬಾರಿ ಕಳೆದುಕೊಂಡರೆ ಮುಂದೆಂದು ವೀಕ್ಷಿಸಲು ಸಾಧ್ಯವಿಲ್ಲ ದಯವಿಟ್ಟು ಬೆಳಿಗ್ಗೆ 9 ಗಂಟೆಗೆ ಎಲ್ಲರೂ ಹಾಜರಾಗಿ🙏🙏🙏 ಈ ರೀತಿಯ ವಿಶಿಷ್ಟ ಪ್ರತಿಭಟನೆಗೆ ಬಣಕಲ್ ಸಾಕ್ಷಿಯಾಗಲಿದೆ,
ಈ ಪ್ರತಿಭಟನಿಗೆ ಬಣಕಲ್ ಸಾರ್ವಜನಿಕರು, ನಮ್ಮ ಊರು ಬಣಕಲ್ ವಾಟ್ಸಪ್ ಗ್ರೂಪ್ ಸದಸ್ಯರು, ವಿವಿಧ ಸಂಘದ ಪದಾಧಿಕಾರಿಗಳು ಸಹಕಾರ ನೀಡಿದ್ದಾರೆ ಎಂದು ಅರುಣ್ ಪೂಜಾರಿ ಬಣಕಲ್ ತಿಳಿಸಿದರು.