ಗಾಂಜಾ ವಶ :ಆರೋಪಿ ಬಂಧನ

ಬಣಕಲ್ :ಬಣಕಲ್ ಬಳಿ ನಿಷೇಧಿತ ಮಾದಕ ಪದಾರ್ಥ ಗಾಂಜಾದೊಂದಿಗೆ ಬೈಕ್ ನಲ್ಲಿ ಹೋಗುತಿದ್ದ ಆರೋಪಿಯನ್ನು ಬಂಧಿಸಿ, ಆತನಿಂದ  86ಗ್ರಾಂ(5000)ಬೆಲೆಯ ಗಾಂಜಾವನ್ನು ವಶಪಡಿಸಿಕೊಂಡ ಬಗ್ಗೆ ಬಣಕಲ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ. ಆದಿಲ್ ಷಾ ಬಂಧಿತ ಆರೋಪಿ. ಆತನಿಂದ ಗಾಂಜಾದ ಜೊತೆ KA-21-L-4366ನೊಂದಣಿ ಸಂಖ್ಯೆಯ ಡಿಸ್ಕವರ್ ಬೈಕ್ ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಬಣಕಲ್ ಪಿ.ಎಸ್.ಐ ಕೌಶಿಕ್. ಸಿಬ್ಬಂದಿಗಳಾದ ಜಗದೀಶ್. ಮಾಲತೇಶ್. ಸಚಿನ್. ಮೆಹಬೂಬ್ ಇದ್ದರು.