ಸರಳವಾಗಿ ಹುಟ್ಟುಹಬ್ಬವನ್ನು ಹೆಗ್ಗುಡ್ಲು ಸರ್ಕಾರಿ ಶಾಲಾ ಮಕ್ಕಳೊಂದಿಗೆ ಆಚರಿಸಿದ ಕುಟುಂಬ

ಬಣಕಲ್ :ಇಂದು ಹುಟ್ಟುಹಬ್ಬಗಳನ್ನು ಅದ್ಧೂರಿಯಾಗಿಯೇ ಆಚರಿಸಿಕೊಳ್ಳುವವರೆ ಜಾಸ್ತಿಯಾಗಿರುವಾಗ ಇಲ್ಲೊಬ್ಬ ದಂಪತಿ ತಮ್ಮ ಮಗನ ಹುಟ್ಟು ಹಬ್ಬವನ್ನು ಹೆಗ್ಗುಡ್ಲು ಶಾಲಾ ಮಕ್ಕಳೊಂದಿಗೆ ಬೆರೆತು ಅವರಿಗೆ ದಾಸೋಹ ವ್ಯವಸ್ಥೆ ಮಾಡುವ ಮೂಲಕ ಮಾದರಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.

ಹೆಗ್ಗುಡ್ಲು ಗ್ರಾಮದ ಮಣಿಕಂಠ ದಂಪತಿಯರೇ ಶಾಲಾ ಮಕ್ಕಳೊಂದಿಗೆ ತಮ್ಮ ಮಗುವಿನ ಹುಟ್ಟುಹಬ್ಬ ಆಚರಿಸಿಕೊಂಡ ದಂಪತಿ, ಮನೆಯಲ್ಲಿ ನಮ್ಮ ಮಕ್ಕಳೊಂದಿಗೆ ಸಂಭ್ರಮದಿಂದ ಹುಟ್ಟು ಹಬ್ಬ ಆಚರಿಸಿಕೊಂಡರೆ ಅದು ಒಂದು ಕುಟುಂಬಕ್ಕೆ ಖುಷಿ ಕೊಡುವ ಸಂಗತಿ, ಆದರೆ ಮಕ್ಕಳು ಇರುವಲ್ಲಿ ತಮ್ಮ ಮಗುವನ್ನು ಕರೆದುಕೊಂಡು ಅವರೊಂದಿಗೆ ಪ್ರೀತಿ ತೊರಿಸಿ ಅಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡರೆ ಆ ಖುಷಿಗೆ ಬೆಲೆ ಕಟ್ಟಲು ಆಗುವುದಿಲ್ಲ ಎಂದು ಪೋಷಕರು ತಿಳಿಸಿದರು.

ವರದಿ :✍️ಸೂರಿ ಬಣಕಲ್