ಬಣಕಲ್ : ದಿನಾಂಕ: 04.01.2024 ರಂದು 21-30 ಗಂಟೆಯ ಸಮಯದಲ್ಲಿ ಬಣಕಲ್ ಠಾಣೆಯ ಪಿ.ಎಸ್.ಐ ಡಿ.ವಿ ರೇಣುಕಾ ಕರ್ತವ್ಯದಲ್ಲಿರುವಾಗ ಮೂಡಿಗೆರೆ ಕಡೆಯಿಂದ ಸ್ಕೂಟಿಯಲ್ಲಿ ಇಬ್ಬರು ಆಸಾಮಿಗಳು ಚೀಲದಲ್ಲಿ ಹಾಗೂ ರಟ್ಟಿನ ಬಾಕ್ಸ್ ಗಳಲ್ಲಿ ಅಕ್ರಮವಾಗಿ ಮದ್ಯವನ್ನು ಇರಿಸಿಕೊಂಡು ಬಣಕಲ್ ಕಡೆಗೆ ಬರುತ್ತಿರುವುದಾಗಿ ಬಾತ್ಮಿದಾರರಿಂದ ದೂರವಾಣಿ ಮುಖಾಂತರ ಮಾಹಿತಿ ಬಂದಿದ್ದು, ಸದರಿ ಮಾಹಿತಿಯನ್ನು ಆಧರಿಸಿ ಬಣಕಲ್ ಠಾಣಾ PSI ರೇಣುಕಾ ರವರು ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಇಬ್ಬರೂ ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು KA 18 EJ 9998 ನೊಂದಣಿ ಸಂಖ್ಯೆಯ ಟಿ ವಿ ಎಸ್ ಕಂಪನಿಯ ನೀಲಿ ಬಣ್ಣದ ಜುಪಿಟರ್ ಸ್ಕೂಟಿಯನ್ನು ಹಾಗೂ ಮದ್ಯ ತುಂಬಿದ ಟೆಟ್ರಾ ಪ್ಯಾಕ್ ಗಳನ್ನು ವಶಪಡಿಸಿಕೊಂಡಿದ್ದಾರೆ
ಕಾರ್ಯಾಚರಣೆಯಲ್ಲಿ ಬಣಕಲ್ ಠಾಣೆಯ ಸಿಬ್ಬಂದಿಗಳಾದ ASI ಶಶಿ, ಜಗದೀಶ್, ಸಚಿನ್, ಅಶೋಕ್ ಭಾಗವಹಿಸಿದ್ದರು.