ಸಿಕ್ಕಿದ ಹಣ ಹಿಂತಿರುಗಿಸಿ ಮಾನವೀಯತೆ ಮೆರೆದ ರಿವರ್ ವ್ಯೂ ಶಾಲೆಯ ವಿದ್ಯಾರ್ಥಿನಿ ಜುಹ ಫಾತಿಮಾ

ಬಣಕಲ್: ಶಾಲೆಯಿಂದ ಮನೆಗೆ ಹೋಗುವ ಸಂದರ್ಭ ರಸ್ತೆಯಲ್ಲಿ ಸಿಕ್ಕಿದ ಹಣವನ್ನು ವಾರಸುದಾರರಿಗೆ ಹಿಂತಿರುಗಿಸುವ ಮೂಲಕ ರಿವರ್ ವ್ಯೂ ಶಾಲೆಯ ವಿದ್ಯಾರ್ಥಿನಿ ಜುಹ ಫಾತಿಮಾ ಮಾನವೀಯತೆ ಮೆರೆದಿದ್ದಾಳೆ.

6ನೇ ತರಗತಿಯ ಜುಹ ಫಾತಿಮಾ ಶಾಲೆಯಿಂದ ಮನೆಗೆ ಹೋಗುತ್ತಿರುವಾಗ ಹಣ ರಸ್ತೆಯಲ್ಲಿ ಬಿದ್ದಿರುವುದು ಕಣ್ಣಿಗೆ ಬಿದ್ದಿತ್ತು, ತಕ್ಷಣ ಅದನ್ನು ತೆಗೆದುಕೊಂಡು ಕಾರ್ ಮೆಕಾನಿಕ್ ಆತಿಫ್ ಅವರಿಗೆ ನೀಡಿ ಮನೆಗೆ ಹೋಗಿದ್ದಾಳೆ, ಆತಿಫ್ ಅವರು ಹಣವನ್ನು ಕಳೆದುಕೊಂಡ ಇಂದಿರಾನಗರದ ಅಶ್ವಕ್ ಅವರಿಗೆ ತಲುಪಿಸಿದ್ದಾರೆ. ವಿದ್ಯಾರ್ಥಿನಿಯ ಪ್ರಾಮಾಣಿಕತೆಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.

ಇವಳ ಈ ಕಾರ್ಯಕ್ಕೆ ಶಾಲೆ ಶಿಕ್ಷಕರು, ಆಡಳಿತ ಮಂಡಳಿ ಮತ್ತು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ವರದಿ :ಸೂರಿ ಬಣಕಲ್