ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ನಡೆಸುತ್ತಿದ್ದರೆ, ಇತ್ತ ಇಸ್ರೇಲ್ ಕೂಡ ತಿರುಗೇಟು ನೀಡುತ್ತಿದೆ. ಈ ಯುದ್ಧದಲ್ಲಿ ಅನೇಕ ಮುಗ್ಧ ಜೀವಗಳು ಬಲಿಯಾಗಿವೆ. ಜನರು ಪ್ರತಿ ಕ್ಷಣವೂ ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ದಿನ ಕಳೆಯುವಂತಾಗಿದೆ.
ಇಸ್ರೇಲ್‌ನಲ್ಲಿ ಇಸ್ರೇಲಿಗರು ಮಾತ್ರವ ಲ್ಲದೆ ವಿವಿಧ ದೇಶಗಳ ಜನರು ವಾಸವಿದ್ದಾರೆ. ಭಾರತೀಯರು ಕೂಡಾ ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಇದೀಗ ಅಲ್ಲಿ ಉಳಿದಿರುವ ಕಾರ್ಕಳದ ದೀಪಕ್ ಕೋಟ್ಯಾನ್ ತನ್ನ ಸುರಕ್ಷತೆಯ ಬಗ್ಗೆ ಬಣಕಲ್ ನ್ಯೂಸ್ ಜೊತೆ ಮಾತನಾಡಿದ್ದು,ಅಲ್ಲಿರುವ ನೈಜ ಘಟನೆಯನ್ನು ವಿವರಿಸಿದ್ದಾರೆ.
ದೀಪಕ್ ಕೋಟ್ಯಾನ್ ಎಂಟು ವರ್ಷದಿಂದ ಇಸ್ರೇಲ್‌ನಲ್ಲಿ ವಾಸಿಸುತ್ತಿದ್ದಾರೆ. ಇದೀಗ ಅವರನ್ನು ಬಣಕಲ್ ನ್ಯೂಸ್ ಸಂಪರ್ಕಿಸಿದಾಗ , ತಾನು ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾರೆ. ತಾವು ಇರುವ ಸ್ಥಳದಲ್ಲಿ ಸದ್ಯಕ್ಕೆ ಯಾವುದೇ ಅಪಾಯ ಇಲ್ಲ ನಾವೆಲ್ಲ ಸುರಕ್ಷಿತವಾಗಿದ್ದೇವೆ, ಇಸ್ರೇಲಿನ ಕೀಬೂತ್ಸ್ ಎಂಬ ವಿಲೇಜ್ ನಲ್ಲಿ ಮೊದಲ ಬಾರಿಗೆ ರಾಕೆಟ್ ದಾಳಿ ನಡೆದಿತ್ತು ಇಸ್ರೇಲ್ ಸರ್ಕಾರವು ಮನೆಯಲ್ಲಿಯೇ ಇರಲು ನಮಗೆ ಕಟ್ಟುನಿಟ್ಟಾದ ಸೂಚನೆ ನೀಡಿದೆ. ಅಲ್ಲದೆ, ಮನೆಯಲ್ಲಿದ್ದರೆ ಸರ್ಕಾರವೂ ಸಹಾಯ ಮಾಡುತ್ತದೆ. ನಾವು ಪ್ರಸ್ತುತ ಇಸ್ರೇಲಿ ಸರ್ಕಾರ ನೀಡಿದ ಸೂಚನೆಗಳನ್ನು ಅನುಸರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ರಾಕೆಟ್ ದಾಳಿಯ ಸ್ಥಳಕ್ಕೆ ದಾವಿಸಿ ಕೆಲವು ವಿಡಿಯೋ ಚಿತ್ರೀಕರಣವನ್ನು ಬಣಕಲ್ ನ್ಯೂಸ್ ಗೆ ರವಾನಿಸಿದ್ದಾರೆ.
ವರದಿ ✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ