ಕುಡಿದ ಅಮಲಿನಲ್ಲಿ ಬೈಕ್ ಸವಾರಿ :ರಸ್ತೆ ಮದ್ಯೆ ಆಯತಪ್ಪಿ ಬಿದ್ದು ರಸ್ತೆಯಲ್ಲೆ ಮಲಗಿದ ವ್ಯಕ್ತಿ

ಬಣಕಲ್ :ಸಬ್ಬೆನಹಳ್ಳಿ ಸಮೀಪ ಕುಡಿದ ಮತ್ತಿನಲ್ಲಿ ಬೈಕ್ ಸವಾರ ಆಯತಪ್ಪಿ ರಸ್ತೆಗೆ ಬಿದ್ದು ಅಲ್ಲೇ ನಿದ್ರಿಸಿದ ಘಟನೆ ನಡೆದಿದೆ.

ಹಾಸನ ಮೂಲದ ವ್ಯಕ್ತಿ ರಾತ್ರಿ 2ಘಂಟೆ ಸಮಯದಲ್ಲಿ ಕುಡಿದ ಅಮಲಿನಲ್ಲಿ ಬೈಕ್ ಚಲಾಯಿಸಲಾಗದೆ ರಸ್ತೆ ಮದ್ಯೆ ಬಿದ್ದು ಏಳಲಾಗದೆ ಮಲಗಿದ್ದಾನೆ ಅದೃಷ್ಟವಶಾತ್ ಗಾಡಿಯ ಇಂಡಿಕೆಟರ್ ಆನ್ ಇದ್ದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ತಕ್ಷಣಕ್ಕೆ ಬಣಕಲ್ ನ ಸಮಾಜ ಸೇವಕ ಆರಿಫ್ ರವರು ಸ್ಥಳಕ್ಕೆ ಆಗಮಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಎಚ್ಚರಿಕೆ ನೀಡಿ ಕಳಿಹಿಸಿಕೊಟ್ಟಿದ್ದಾರೆ.

ವರದಿ :✍️ಸೂರಿ ಬಣಕಲ್