ಮೂಡಿಗೆರೆ ತಾಲೂಕು ಕುಂದೂರು ಗ್ರಾಮದ ವಿಜಯಪ್ರಕಾಶ್ ಎಂಬವರ ತೋಟದಲ್ಲಿ (ಕಾಟಿ) ಕಾಡುಕೋಣ ದಾಳಿಗೆ ಸುಮಾರು ಎರಡು ಎಕರೆ ಅಡಿಕೆ ತೋಟ ಸಂಪೂರ್ಣ ನಾಶವಾಗಿದ್ದು ಈ ಭಾಗದಲ್ಲಿ ಕಾಡೆಮ್ಮೆ ಮತ್ತು ಕಾಡಾನೆಗಳು ಸತತ ದಾಳಿ ಮಾಡುತ್ತಿದ್ದ ಕೂಡಲೇ ಅರಣ್ಯ ಇಲಾಖೆ ಈ ಭಾಗಕ್ಕೆ ರಕ್ಷಣೆ ನೀಡಬೇಕು ಮತ್ತು ಆಗಿರುವ ಸಂಪೂರ್ಣ ನಷ್ಟವನ್ನು ತುಂಬಿಕೊಡಬೇಕೆಂದು ಗ್ರಾಮಸ್ಥರು ಮತ್ತು ಸಂತ್ರಸ್ತರ ಅಗ್ರಹ ಮಾಡಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಆಗಮಿಸಿ ಅಲ್ಲಿನ ಸ್ಥಿತಿಗತಿಯನ್ನು ಗಮನಿಸಿದ್ದಾರೆ

ಕಳೆದ 3 ದಿನಗಳಿಂದ ಕಾಡುಕೋಣಗಳು ಅಡಿಕೆ ತೋಟಕ್ಕೆ ನಿರಂತರವಾಗಿ ದಾಳಿ ಮಾಡಿ ಸಂಪೂರ್ಣವಾಗಿ ಅಡಿಕೆ ಮರವನ್ನು ನಾಶ ಮಾಡಿದೆ